ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಬಲಿ
ಕಲಬುರಗಿ: ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಬಾಲಕ ಸಾವನಪ್ಪಿರುವ ಘಟನೆ ಕಲಬುರಗಿ ನಗರದ ದರಿಯಾಪುರ ಕೋಟನೂರ್ ಬಡಾವಣೆಯಲ್ಲಿ ನಡೆದಿದೆ.
4 ವರ್ಷದ ಮನೋಜ್ ಪೂಕಾರಿ (4) ಮೃತ ಬಾಲಕ. ಮನೋಜ್ ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪಾ ಪೂಜಾರಿ ಪುತ್ರ. ವಾಚ್ ಮೆನ್ ಕೆಲಸ ಮಾಡಿಕೊಂಡಿದ ಶರಣಬಸಪ್ಪಾ ಕೆಲಸದ ನಿಮಿತ್ಯ ಕಲಬುರಗಿಯಲ್ಲಿ ವಾಸವಾಗಿದ್ದರು.



