November 2, 2026

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಸಯ್ಯದ್ ಅಲಿ ಬಾಫಕಿ ತಂಙಳ್ ನಿಧನ‌

0
image_editor_output_image1785096587-1793630330483

ಕೋಝಿಕ್ಕೋಡ್: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷರು ಹಾಗೂ ಮರ್ಕಝ್ ಸ್ಸಖಾಫತಿ ಸುನ್ನಿಯ್ಯಾ ಇದರ ಅಧ್ಯಕ್ಷರಾಗಿದ್ದ ಸಯ್ಯದ್ ಅಲಿ ಬಾಫಕಿ ತಂಙಳ್ (88) ಅವರು ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಸಯ್ಯದ್ ಅಲಿ ಬಾಫಕಿ ತಂಙಳ್ ಅವರು ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಮತ್ತು ಮರ್ಕಝ್ ಅಧ್ಯಕ್ಷರಾಗಿ ಹಾಗೂ ಹಲವಾರು ಮಹಲ್ಲಾಗಳ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದರು.

1938 ರಲ್ಲಿ ಕೊಯಿಲಾಂಡಿಯಲ್ಲಿ ಸಯ್ಯದ್ ಅಹ್ಮದ್ ಬಾಫಕಿ ಮತ್ತು ಸಯ್ಯದತ್ ನಫೀಸಾ ಬೀವಿ ಅವರ ಪುತ್ರನಾಗಿ ಜನಿಸಿದ್ದ ಸಯ್ಯದ್ ಅಲಿ ಬಾಫಕಿ ತಂಙಳ್ 1978 ರಿಂದ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಸಮಸ್ತ ಕೇರಳ ಇಸ್ಲಾಂ ಮತ ಶಿಕ್ಷಣ ಮಂಡಳಿಯ ಕೋಶಾಧಿಕಾರಿ ಹಾಗೂ ಜಾಮಿಅಃ ನೂರಿಯ್ಯಾ ಹಳೆಯ ವಿದ್ಯಾರ್ಥಿ ಒಕ್ಕೂಟವಾದ ‘ಫೈಝೀಸ್’ ಸಂಸ್ಥೆಯ ಅಧ್ಯಕ್ಷರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಅಜ್ಮೀರ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಹೆಸರಿನಲ್ಲಿ ಜಾಮಿಅಃ ಮೊಯಿನಿಯ್ಯಾ ಅಜ್ಮೀರ್ ಶರೀಫ್ ವತಿಯಿಂದ ನೀಡಲಾಗುವ ಎರಡನೇ ‘ಸುಲ್ತಾನುಲ್ ಹಿಂದ್’ ಪ್ರಶಸ್ತಿಗೆ ಇವರು ಭಾಜನರಾಗಿದ್ದರು.

Leave a Reply

Your email address will not be published. Required fields are marked *

error: Content is protected !!