October 29, 2026

ಯುವತಿಯ ವಿಡಿಯೋ ಮಾಡಿ ಸಿಕ್ಕಿಬಿದ್ದ ಭೂಪ: ದೂರು ದಾಖಲು

451165c6-905d-4518-9b45-098fed356a62

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಹೆಣ್ಮಕ್ಕಳಿಗೆ ಕಿರುಕುಳಗಳು ಹೆಚ್ಚಾಗುತ್ತಿದ್ದು, ಮೆಟ್ರೋ ನಿಲ್ದಾಣದ ಒಳಗೆ ಯುವತಿಯರಿಗೆ ಸೇಫ್ಟಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಅ.27ರಂದು ವ್ಯಕ್ತಿಯೊಬ್ಬ ಯುವತಿಯ ವಿಡಿಯೋ ಮಾಡಿ ತಗ್ಲಾಕ್ಕೊಂಡಿದ್ದು, ಇದೀಗ ಕಿರುಕುಳ ಕೊಟ್ಟವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕಿಡಿಗೇಡಿಗಳು ಯುವತಿಯರಿಗೆ ಕಿರುಕುಳ ಕೊಡ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಮ್ಮ ಮೆಟ್ರೋದಲ್ಲಿ ಸೌಪಿಕಾ ಎಂಬ ಯುವತಿಯ ವಿಡಿಯೋ ಮಾಡಿ, ವ್ಯಕ್ತಿಯೊಬ್ಬ ತಗ್ಲಾಕ್ಕೊಂಡಿದ್ದಾನೆ. ಅ.27ರ ಸಂಜೆ 4 ಘಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿಗೆ ಕಿರುಕುಳ ನೀಡಿ, ಅನುಮತಿಯಿಲ್ಲದೆ ವಿಡಿಯೋ ಮಾಡಿದ ಭೂಪನ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೌಪಿಕಾ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಘಟನೆಯ ಬಗ್ಗೆ ವೀಡಿಯೋ ಹಂಚಿಕೊಂಡಿದ್ದಾರೆ. ವೈಟ್‌ಫೀಲ್ಡ್‌ನ ಕಾಡುಗೋಡಿ ರಸ್ತೆ ಬಳಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಯುವಕನೊಬ್ಬ ಅನುಮತಿಯಿಲ್ಲದೆ ಯುವತಿಯ ವಿಡಿಯೋ ಮಾಡಿಕೊಂಡಿದ್ದಾನೆ. ಇದನ್ನ ಗಮನಿಸಿದ ಯುವತಿ ಆತನನ್ನ ಪ್ರಶ್ನಿಸಿ ಮೊಬೈಲ್ ಕಿತ್ತುಕೊಂಡು ವೀಡಿಯೋ ತೋರಿಸುವಂತೆ ಹೇಳಿದ್ದಾರೆ. ಕೂಡಲೇ ಅಲ್ಲಿನ ಮೆಟ್ರೋ ಭದ್ರತಾ ಸಿಬ್ಬಂಧಿಗಳು ಬಂದು, ಆತನ ಮೊಬೈಲ್ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಕಿರುಕುಳ ಕೊಟ್ಟ ವ್ಯಕ್ತಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

error: Content is protected !!