ರೈತನ ಭೂಮಿ ಸರ್ವೆ ಮಾಡಲು ಲಂಚ: ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಲೈಸನ್ಸ್ ಸರ್ವೆಯರ್
ನೆಲಮಂಗಲ:ನೆಲಮಂಗಲ ತಾಲೂಕು ಕಚೇರಿ ಮೇಲೆ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ರೈತರೊಬ್ಬರ ಭೂಮಿ ಸರ್ವೆ ಮಾಡಲು ಲಂಚಕ್ಕೆ ಬೇಡಿಯಿಕಟ್ಟಿದ್ದ ಅಧಿಕಾರಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮಹೇಶ್ ಗೌಡ ಲೋಕಾ ಬೆಲೆಗೆ ಸಿಕ್ಕಿಬಿದ್ದ ಲೈಸನ್ಸ್ ಸರ್ವೆಯರ್. ಮಹೇಶ್ ಗೌಡ ರೈತರೊಬ್ಬರ ಬಳಿ ಭೂಮಿ ಸರ್ವೆಗೆ 20,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ರೈತನಿಂದ 20 ಸಾವಿರ ಹಣ ಪಡೆಯುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೂರು ಕಾರುಗಳಲ್ಲಿ ಬಂದಿರುವ 10ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು, ನೆಲಮಂಗಲ ತಾಲೂಕು ಕಚೇರಿಯ ಸರ್ವೆ ಕಚೇರಿಯಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ.



