ಮಂಗಳೂರು: ಸ್ನೇಹಿತರೊಂದಿಗೆ ಪಣಂಬೂರು ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ನೀರಿನಲ್ಲಿ ಬೆಳ್ತಂಗಡಿಯ ಬಾಲಕ ಸಮುದ್ರಪಾಲು
ಮಂಗಳೂರು: ಸ್ನೇಹಿತರೊಂದಿಗೆ ಪಣಂಬೂರು ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕನೋರ್ವ ಸಮುದ್ರಪಾಲಾಗಿರುವ ಘಟನೆ ಅ.4ರಂದು ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಸೇಸಪ್ಪ ಎಂಬವರ ಪುತ್ರ ಶ್ರೇಯಸ್ (14) ಸಮುದ್ರಪಾಲಾದ ಬಾಲಕ ಎಂದು ತಿಳಿದು ಬಂದಿದೆ.
ಶ್ರೇಯಸ್ ತನ್ನ ಐದು ಮಂದಿ ಸ್ನೇಹಿತರೊಂದಿಗೆ ಪಣಂಬೂರು ಕಡಲ ಕಿನಾರೆಗೆ ಬಂದಿದ್ದು,
ಬಳಿಕ ಸಮುದ್ರದಲ್ಲಿ ಸ್ನೇಹಿತರೆಲ್ಲರೂ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸಮುದ್ರದ ಭಾರೀ ಅಲೆಯ ಹೊಡೆತಕ್ಕೆ ಸಿಲುಕಿ ಆತ ಸಮುದ್ರ ಪಾಲಾಗಿದ್ದಾನೆ ಎಂದು ಎನ್ನಲಾಗಿದೆ.
ಈ ಸಂಬಂಧ ಶ್ರೇಯಸ್ ತಂದೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶ್ರೇಯಸ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ





