ಮಂಗಳೂರು: ಮೊಬೈಲ್ ದರೋಡೆ ಪ್ರಕರಣ: ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ
ಮಂಗಳೂರು: ವಲಸೆ ಕಾರ್ಮಿಕನೊಬ್ಬನನ್ನು ಕಬ್ಬಿಣದ ರಾಡ್ ತೋರಿಸಿ ಬೆದರಿಸಿ ಹಗಲು ದರೋಡೆ ಮಾಡಿದ ಸುಮಾರು ಆರು ವರ್ಷಗಳ ನಂತರ, ಇಬ್ಬರು ಆರೋಪಿಗಳಿಗೆ ಕೊನೆಗೂ ಶಿಕ್ಷೆಯಾಗಿದೆ.
2020 ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಇಬ್ಬರಿಗೂ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 25,000 ರೂ. ದಂಡ ವಿಧಿಸಿದೆ.
ಶಿಕ್ಷಗೆ ಒಳಗಾದ ಆರೋಪಿಗಳಾದ ಕೆಂಜಾರ್ ಗ್ರಾಮದ ಪೊರ್ಕೋಡಿ ನಿವಾಸಿ ಶಂಸುದ್ದೀನ್ ಅವರ ಮಗ ಜಾವಿದ್ ಅಖ್ತರ್ ಅಲಿಯಾಸ್ ಅಖ್ತರ್ (28) ಮತ್ತು ಕಸ್ಬಾ ಬೆಂಗ್ರೆಯಲ್ಲಿ ವಾಸಿಸುವ ಅನ್ವರ್ ಅವರ ಮಗ ತೋಯಿದ್ ಖಾದರ್ ಅಲಿಯಾಸ್ ತೋಯಿ (24) ಎಂದು ಗುರುತಿಸಲಾಗಿದೆ.
ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಮೋಹನ್ ಜೆಎಸ್, ಐಪಿಸಿಯ ಸೆಕ್ಷನ್ 392 ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಇಬ್ಬರನ್ನೂ ತಪ್ಪಿತಸ್ಥರೆಂದು ಘೋಷಿಸಿ, 7 ವರ್ಷಗಳ ಜೈಲು ಶಿಕ್ಷೆ ಮತ್ತು 25,000 ರೂ. ದಂಡವನ್ನು ವಿಧಿಸಿದ್ದಾರೆ





