

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಮಂಗಳೂರು (ದ.ಕ ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಬಾಲಕ /ಬಾಲಕಿಯರ
ಭಾರ ಎತ್ತುವ ಸ್ಪರ್ಧೆ -2026 ಸೈಂಟ್ ರೀಟಾ ಶಾಲೆಯಲ್ಲಿ ನಡೆಯಿತು.

ಶಾಲಾ ಸಂಚಾಲಕರಾದ ವಂದನೀಯ ಫಾ.ಮೈಕಲ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಲೇರಿಯನ್ ವೇಗಸ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ನಾಯಕ್, ಕ್ಲಸ್ಟರ್ ಮಟ್ಟದ ನೋಡಲ್ ಅಧಿಕಾರಿ ಅಶೋಕ್ ಭಟ್, ಪ್ರೇಮನಾಥ್ ಶೆಟ್ಟಿ, ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರವೀಣ್ ಕುಮಾರ್ ಶೆಟ್ಟಿ,
ಪ್ರಮೋದ್ ಕುಮಾರ್ ಶೆಟ್ಟಿ, ಶಾಲಾ ಪ್ರಾಂಶುಪಾಲ ವಂದನೀಯ ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್, ಜಂಟಿ ಶಾಲಾ ಮುಖ್ಯ ಶಿಕ್ಷಕಿ ಸಿ. ಮರೀನಾ ಹಾಗೂ ಸಿಸ್ಟರ್ ಜಾನೆಟ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ವಂದನೀಯ ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿದರು. ವಿಷ್ಣು ನಾರಾಯಣ ಹೆಬ್ಬಾರ್ ಪ್ರಾಸ್ತಾವನೆ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಸತ್ಯ ಸಾಯಿ ಲೋಕಸೇವಾ ಅನುದಾನಿತ ಪ್ರಾಥಮಿಕ ಶಾಲೆ, ಇದರ ದೈಹಿಕ ಶಿಕ್ಷಕರಾದ ರಾಜೇಂದ್ರ ರೈ ಹಾಗೂ ಆರ್.ಎಂ.ಎಸ್.ಎ ವಿಟ್ಲ ಇದರ ದೈಹಿಕ ಶಿಕ್ಷಕ ವಿದ್ಯಾಶಂಕರ್ ಡಿ ಇವರನ್ನು ಸನ್ಮಾನಿಸಲಾಯಿತು.
ಬಾಲಕರ 60 ಕೆಜಿ ವಿಭಾಗದಲ್ಲಿ ವಿಟ್ಲ ಸೈಂಟ್ ರೀಟಾ ಶಾಲೆಯ ಗುರುಪ್ರೀತ್, 98 ಕೆಜಿ ವಿಭಾಗದಲ್ಲಿ ಬಿ. ವಿನೀತ್ ಕುಮಾರ್ ಹಾಗೂ ಬಾಲಕಿಯರ ವಿಭಾಗದ 77 ಕೆಜಿ ತೂಕ ವಿಭಾಗದಲ್ಲಿ ಆಯಿಷತ್ ನೌಫೀದಾ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ವೇಟ್ ಲಿಫ್ಟಿಂಗ್ 2026 ಬಾಲಕರ ವಿಭಾಗದಲ್ಲಿ ರಾಮಕುಂಜ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಸುಳ್ಯಪದವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಬಹುಮಾನ ನೀಡಿ ಪ್ರೋತ್ಸಾಯಿಸಲಾಯಿತು.





