September 1, 2026

ವಿಟ್ಲ: ವೃದ್ಧೆಯೊಬ್ಬರು ಮನೆ ಮುಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ

0
IMG-20260901-WA0015

ವಿಟ್ಲ: ದೀರ್ಘಕಾಲದ ಅನಾರೋಗ್ಯದಿಂದ ನೊಂದ ವೃದ್ಧೆಯೊಬ್ಬರು ಮನೆ ಮುಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ.

ಪುತ್ತೂರಿನ ಆಟೋ ಚಾಲಕ ನಾರಾಯಣ ಗೌಡ ಎಂಬವರ ತಾಯಿ ಗಿರಿಜಾ ಗೌಡ (78) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಅವರ ನೇತೃತ್ವದ ತಂಡ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!