ಮನೆ ಮೇಲಿನ ನೀರಿನ ಟ್ಯಾಂಕಲ್ಲಿದ್ದ ಚೀಲಗಳಲ್ಲಿ ದೇಹದ ಭಾಗಗಳು ಪತ್ತೆ
ತಮಿಳುನಾಡು: ಸೇಲಂನ ಬಾಡಿಗೆ ಮನೆಯೊಂದರ ಚಾವಣಿಯಲ್ಲಿದ್ದ ನೀರಿನ ಟ್ಯಾಂಕ್‌ನಲ್ಲಿ ಅಂದಾಜು 40 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ದೇಹದ ಭಾಗಗಳು ಚೀಲಗಳಲ್ಲಿ ಪತ್ತೆಯಾಗಿವೆ.
ಮನೆಯಲ್ಲಿ ವಾಸವಿರುವ ರಮೇಶ್ ಎಂಬ ಅರ್ಚಕರ ಕುಟುಂಬವೊಂದು ತಂಜಾವೂರಿಗೆ ತೆರಳಿತ್ತು. ಸೋಮವಾರ ವಾಪಸಾದಾಗ ಬಚ್ಚಲು ಮನೆಯ ನೀರು ತುಸು ಕೆಂಪಾಗಿರುವುದು, ದುರ್ವಾಸನೆಯಿಂದ ಕೂಡಿರುವುದು ಕಂಡುಬಂದಿದೆ. ರಮೇಶ್ ತಮ್ಮ ಪುತ್ರನೊಂದಿಗೆ ಮನೆ ಮೇಲೆ ಹೋಗಿ ಟ್ಯಾಂಕಿನೊಳಗೆ ಇಣುಕಿದ್ದಾರೆ. ಅಲ್ಲಿ ಚೀಲಗಳು ಕಂಡುಬಂದಿದ್ದು, ಅವುಗಳಲ್ಲಿ ಒಂದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಮಹಿಳೆಯ ಕೈ ಕಾಲುಗಳು, ಬೆರಳುಗಳು ಕಂಡಿವೆ. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.





