ಬೆಳ್ತಂಗಡಿ: ಅಪ್ರಾಪ್ತ ಅನ್ಯಕೋಮಿನ ಬಾಲಕಿಗೆ ಲೈಂಗಿಕ ದೌರ್ಜನ್ಯ- ಕೊಲೆ ಬೆದರಿಕೆ ಪ್ರಕರಣದ ಆರೋಪಿಗೆ ಜಾಮೀನು

ಪುಂಜಾಲಕಟ್ಟೆ: ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಜೀವ ಬೆದರಿಕೆಯೊಡ್ಡಿದ ಆರೋಪಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.
ಮಚ್ಚಿನ ಗ್ರಾಮದ ಬಂಗೇರಕಟ್ಟೆ ನಿವಾಸಿ ನವಾಜ್ ಎಂಬಾತನ ವಿರುದ್ಧ ಫೋಕ್ಸೋ ಮತ್ತು ಜೀವ ಬೆದರಿಕೆ ಕಾಯಿದೆಯಡಿ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪುಂಜಾಲಕಟ್ಟೆ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಂದಿಗೆ ಆರೋಪಿ ನವಾಝ್ ಎಂಬಾತ ತುಂಬಾ ಸಲುಗೆಯಿಂದ ನಡೆದುಕೊಂಡಿದ್ದು, ಬಳಿಕ ಆಕೆಯೊಂದಿಗೆ ಮೊಬೈಲ್ ಸಂಪರ್ಕವಿಟ್ಟುಕೊಂಡಿದ್ದನು. ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯ ಮನೆಗೆ ಹೋಗುತ್ತಿದ್ದ ಈತ ಆಕೆಯೊಂದಿಗೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದು, ಬಳಿಕ ಯಾರಿಗಾದರೂ ಈ ವಿಚಾರ ತಿಳಿಸಿದ್ದಲ್ಲಿ ಕೊಂದು ಬಿಡುವುದಾಗಿ ಜೀವ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಅಲ್ಲದೆ ಪದೇ ಪದೇ ನಿರಂತರ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಎಂದು ದೂರು ನೀಡಲಾಗಿತ್ತು.
ಬಾಲಕಿಯು ನೀಡಿದ ದೂರಿನನ್ವಯ ಆರೋಪಿ ನವಾಜ್ ವಿರುದ್ಧ ಜೀವ ಬೆದರಿಕೆ ಮತ್ತು ಫೋಕ್ಸೋ ಕಾಯ್ದೆಯಡಿ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು , ಆರೋಪಿ ನವಾಜ್ ನನ್ನು ಬಂಧಿಸಿ , ಜೈಲಿಗಟ್ಟಿದ್ದರು.
ಆರೋಪಿ ನವಾಝ್ ಪರವಾಗಿ ಉಪ್ಪಿನಂಗಡಿಯ ನ್ಯಾಯವಾದಿ ಜುಬೇದ ಸರಳಿಕಟ್ಟೆ ವಾದಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.