July 31, 2026

ವಿಟ್ಲ: ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಕಲರ್ ಪ್ರಿಂಟರ್ ಕೊಡುಗೆ

0
IMG-20260731-WA0001

ವಿಟ್ಲ: ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಯ ಆಡಳಿತಾತ್ಮಕ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಕಲರ್ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಜನಪ್ರಿಯ ಶಾಲೆಯ ನಿರ್ದೇಶಕರಾದ ಶ್ರೀ ನೌಶೀನ್ ಬದ್ರಿಯಾ, ಪ್ರಾಂಶುಪಾಲರಾದ ಶ್ರೀ ಲಿಬಿನ್ ಝೇವಿಯರ್ ಹಾಗೂ ಆಡಳಿತಾಧಿಕಾರಿ ಶ್ರೀ ಸಫ್ವಾನ್ ಪಿಲಿಕಲ್ ಅವರು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀ ಪ್ರಕಾಶ್ ದೇವಾಡಿಗ ಅವರನ್ನು ಭೇಟಿಯಾಗಿ ಕಲರ್ ಪ್ರಿಂಟರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಇತರ ಸಿಬ್ಬಂದಿಯೂ ಉಪಸ್ಥಿತರಿದ್ದರು.

ಪ್ರಿಂಟರ್ ಕೊಡುಗೆಯನ್ನು ಸ್ವೀಕರಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ, ಈ ಉಪಯುಕ್ತ ಕೊಡುಗೆಗಾಗಿ ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ಚೇರ್ಮನ್ ಡಾ. ಅಬ್ದುಲ್ ಬಶೀರ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.  ಈ ಕಾರ್ಯವು ಪೊಲೀಸ್ ಇಲಾಖೆ ಮತ್ತು  ಸಂಸ್ಥೆಯ ನಡುವಿನ ಉತ್ತಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವಾಗಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!