ವಿಟ್ಲ: ಪಿ ಎಂ ಶ್ರೀ ಪ್ರೌಢ ಶಾಲಾ ಸಹಶಿಕ್ಷಕಿ ಅಮಾನತು: ವಿವಿಧ ದೂರುಗಳು ಬಂದ ಹಿನ್ನೆಲೆ ಇಲಾಖೆಯ ಉಪನಿರ್ದೇಶಕರಿಂದ ಆದೇಶ
ವಿಟ್ಲ: ಪಿ.ಎಂ. ಶ್ರೀ ಪ್ರೌಢ ಶಾಲೆಯ ಸಹ ಶಿಕ್ಷಕಿಯೊಬ್ಬರನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸಹಶಿಕ್ಷಕಿ ಅನ್ನಪೂರ್ಣ ಅಮಾನತಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ವಿವಿಧ ದೂರುಗಳು ಹೋದ ಹಿನ್ನಲೆಯಲ್ಲಿ ೮ವಿಷಯ ಉಲ್ಲೇಖಿಸಿ ಅಮಾನತು ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಆಯುಕ್ತರಿಂದ, ಕಾರ್ಯದರ್ಶಿಗಳಿಂದ ಪತ್ರಗಳು ಬಂದಿದ್ದು, ಈ ವಿಚಾರದಲ್ಲಿ ವಿಚಾರಣೆಗಳು ನಡೆದ ಬಳಿಕ ಈ ಆದೇಶವಾಗಿದೆ ಎಂದು ಹೇಳಲಾಗಿದೆ.




