June 24, 2026

ವಿಟ್ಲ: ಆವರಣ ಗೋಡೆ ಇಲ್ಲದ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಫ್ರೆಂಡ್ಸ್ ವಿಟ್ಲ ತಂಡ

0
image_editor_output_image1277561807-1782325261009

ವಿಟ್ಲ: ಆವರಣ ಗೋಡೆಯಿಲ್ಲದ ತೆರೆದ ಬಾವಿಯೊಂದಕ್ಕೆ ಆಕಸ್ಮಿಕವಾಗಿ ಬಿದ್ದ 8 ತಿಂಗಳ ಗರ್ಭಿಣಿ ಹಸುವನ್ನು ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಪಶುವೈದ್ಯರ ತಂಡ ಜಂಟಿಯಾಗಿ ನಡೆಸಿದ 5 ಗಂಟೆಗಳ ಸುದೀರ್ಘ ಹಾಗೂ ರೋಚಕ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದ ಮಾನವೀಯ ಘಟನೆ ಕೇಪು ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕವಾಗಿ ಬಾವಿಗೆ ಬಿದ್ದ ಗೋವು:
ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿನ ಕಾಸಿಂ ಎಂಬವರ ಮನೆಯ ಸಮೀಪ ಮೇಯಲು ಬಿಟ್ಟಿದ್ದ ಸ್ಥಳೀಯ ನಿವಾಸಿ ಸದಾನಂದ ಶೆಟ್ಟಿ ಅವರಿಗೆ ಸೇರಿದ ಎಂಟು ತಿಂಗಳ ಗರ್ಭಿಣಿ ಹಸುವು, ಆವರಣ ಗೋಡೆಯಿಲ್ಲದ ಸುಮಾರು 43 ಅಡಿ ಆಳದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದೆ. ಬಾವಿಯೊಳಗೆ ನೀರಿದ್ದು, ಹಸುವು ಬದುಕುಳಿಯಲು ಸಹಾಯಕ್ಕಾಗಿ ಗೋಳಿಡುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡರು. ಬಾವಿಯು ಕುಸಿದು ಬೀಳುವ ಹಂತದಲ್ಲಿದ್ದ ಕಾರಣ ರಕ್ಷಣಾ ಕಾರ್ಯವು ಅತ್ಯಂತ ಸವಾಲಿನಿಂದ ಕೂಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ “ಫ್ರೆಂಡ್ಸ್ ವಿಟ್ಲ ತಂಡ ತಮ್ಮ ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿದರು. ನೀರಿನಲ್ಲಿ ಸುಮಾರು ಐದು ಗಂಟೆಗಳಿಂದ ಒದ್ದಾಡುತ್ತಿದ್ದ ಹಸುವಿನ ಹೊಟ್ಟೆಯ ಭಾಗಕ್ಕೆ ಹಗ್ಗ ಕಟ್ಟಿ ಆಧಾರ ನೀಡುವ ಮೂಲಕ ಮೇಲೆತ್ತಿದರು.

Leave a Reply

Your email address will not be published. Required fields are marked *

error: Content is protected !!