June 24, 2026

ಕೊಡಂಗಾಯಿ: ಮುಅಲ್ಲಿಂ ಡೇ ಹಾಗೂ ಹಿಜ್ ರ ಸಂದೇಶ.

0
IMG-20260624-WA0054

ಸಿರಾಜುಲ್ ಇಸ್ಲಾಂ ಮದರಸ [SKIMVB-7386]
(ಮದ್ರಸತ್ತುನ್ನೂರಿಯ ಕೊಡಂಗಾಯಿ, ಶಂಸುಲ್ ಹುದಾ ಮದರಸ ರಾಧುಕಟ್ಟೆ)
ಮುಹ್ಯದ್ದೀನ್ ಜುಮಾ ಮಸೀದಿ ಕೊಡಂಗಾಯಿ ಇದರ ಪೋಷಕ ಸಮಿತಿ ವತಿಯಿಂದ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನಿರ್ದೇಶ ಪ್ರಕಾರ ಮುಅಲ್ಲಿಂ ಡೇ – ಪ್ರಾರ್ಥನಾ ಸಂಗಮ ಹಾಗೂ ಹಿಜ್’ರ ಸಂದೇಶ ಕಾರ್ಯಕ್ರಮ
ಸಿರಾಜುಲ್ ಇಸ್ಲಾಂ ಮದ್ರಸ ವಠಾರದಲ್ಲಿ
ಪೋಷಕ ಸಮಿತಿ ಅಧ್ಯಕ್ಷರಾದ ಜ|ಹಮೀದ್ ಟಿ ಕೊಡಂಗಾಯಿ ಇವರ ಅಧ್ಯಕ್ಷತೆ ಯಲ್ಲಿ ಜರಗಿತು.

ಮುಹಲ್ಲಿಮ್ ಬಹು|ಅನ್ಸಾರ್ ಸುಲ್ತಾನಿ ದುಆ ಮೂಲಕ ಚಾಲನೆ ನೀಡಿದ ಕಾರ್ಯಕ್ರಮವನ್ನು ಬಹು|ಗಫೂರ್ ಹನೀಫಿ ಉದ್ಘಾಟಿಸಿದರು.

ಸ್ಥಳೀಯ ಖತೀಬರಾದ ಬಹು|ಬಿ ಎ ಸಿದ್ದೀಕ್ ಅರ್ಷದಿ ಉಸ್ತಾದರು ಹಿಜ್’ರ ಸಂದೇಶ ಬಾಷಣ ಮಾಡಿದರು.

ಮುಫತ್ತಿಸ್ ಬಹು| ಎಂ ಎಚ್ ಖಾಸಿಂ ಮುಸ್ಲಿಯಾರ್  ಮಾತನಾಡಿ  ಮುಹಲ್ಲಿಮ್ ಫoಡ್ ಶೇಖರಣೆ ಹಾಗೂ ಮುಹಲ್ಲಿಮ್ ಕ್ಷೇಮ ನಿಧಿ ಯಾವ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಜಮಾಅತ್ ಅಧ್ಯಕ್ಷರಾದ ಜ|ಅಬ್ದುಲ್ಲ ಕುಂಞ ಮೂರ್ಜೆಬೆಟ್ಟು, ಮಾಜಿ ಅದ್ಯಕ್ಷರಾದ ಜ|ಮಹಮ್ಮದ್ ಕುಂಞ ಸನ್ಯಾಸಿ ಹಿತ್ತಿಲು, ಮುಹದ್ದಿನ್ ಬಹು|ಹಂಝ ಝ್ಹುಹ್ರಿ,ಜ|ಹನೀಫ್ ಪಿ,ಜ|ಉಮರ್ ಕೆ,ಜ|ಅಬ್ದುಲ್ ಕುಂಞ ಕೆ ಎಂ, ಜ|ಅಬ್ದುಲ್ ಖಾದರ್ ಟಿ ಎಂ ಹಾಗೂ ಪೋಷಕರು ಬಾಗವಹಿಸಿದ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿಗಳು ಉಸ್ತಾದರುಗಳಿಗೆ ಪಾರಿತೋಷಕಗಳನ್ನು ನೀಡುವ ಮೂಲಕ ಗೌರವಿಸಿದರು.

ಪೋಷಕ ಸಮಿತಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಟಿ ಎಂ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!