June 23, 2026

ಪ್ರಿಯಕರನ ಜೊತೆ ಯುವತಿ ಪರಾರಿ:  ಮನನೊಂದು ಯುವಕ ಆತ್ಮಹತ್ಯೆ

0
image_editor_output_image203661707-1782188621864

ಚಿಕ್ಕಮಗಳೂರು: ಗೆಳತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿರುವ ಘಟನೆಗೆ ಸಂಬಂಧಿಸಿ ಆಕೆಯ ತಂದೆ ತನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ.

ಮೃತನನ್ನ ಚಂದನ್ (20) ಎಂದು ಗುರುತಿಸಲಾಗಿದೆ. ಕುಡ್ಲೂರು ಗ್ರಾಮದ 18 ವರ್ಷದ ಯುವತಿಯೊಬ್ಬಳು ಪತ್ರ ಬರೆದಿಟ್ಟು ತನ್ನ ಪ್ರಿಯಕರನ ಜೊತೆ ಜೂ.14 ರಂದು ಹೋಗಿದ್ದಳು. ಈ ಬಗ್ಗೆ ಯುವತಿಯ ತಂದೆ ಆಕೆಯ ಸ್ನೇಹಿತ‌ ಚಂದನ್‌ಗೆ ಆಕೆ ಹೋಗಲು ನೀನೇ ಕಾರಣ, ಎಲ್ಲಿದ್ದಾಳೆ ಅಂತ ಗೊತ್ತು ಹೇಳು ಎಂದು ಗಲಾಟೆ ಮಾಡಿದ್ದರು. ಮೊಬೈಲ್ ಕಾಲ್ ಲೀಸ್ಟ್ ಆಧಾರದ ಮೇಲೆ ಕಡೂರು (Kaduru) ತಾಲೂಕಿನ ಬೀರೂರು ಪೊಲೀಸರು ಚಂದನ್‌ನನ್ನ‌ ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು.

ಜೂ.21ರ ಸಂಜೆ ವಿಚಾರಣೆ ಮುಗಿಸಿಕೊಂಡು ಮನೆಗೆ ಹೋದ ಚಂದನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಯುವ ಮುನ್ನ ತನ್ನ ತಾಯಿಗೆ ಯುವಕ ಮೆಸೇಜ್‌ ಮಾಡಿ, ಆ ಹುಡುಗಿ ಎಲ್ಲಿದ್ದಾಳೆ ಗೊತ್ತಿಲ್ಲ. ಆಕೆ ಹೋಗಿರೋದಕ್ಕೆ ಕಾರಣ ನಾನಲ್ಲ. ಊರಿನ ಜನ ನನ್ನನ್ನು ಒಂದು ರೀತಿ ನೋಡ್ತಿದ್ದಾರೆ. ಆ ಹುಡುಗಿ ಅಪ್ಪ ನನಗೆ ತುಂಬಾ ಬೈದ್ರು, ನನಗೆ ಬದುಕಲು ಇಷ್ಟ ಇಲ್ಲ. ಕ್ಷಮಿಸಿ ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!