June 18, 2026

ವಿಟ್ಲ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಜೂನ್ 23ರಂದು ವಿಟ್ಲದಲ್ಲಿ ಕಾಲ್ನಡಿಗೆ ಜಾಥಾ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ತಾಲೂಕು ಹೋರಾಟ ಸಮಿತಿ

0
IMG-20260618-WA0005

​ವಿಟ್ಲ: ನಮ್ಮ ವಿಟ್ಲವನ್ನು ತಾಲೂಕನ್ನಾಗಿ ಮಾಡುವಂತೆ ಆಗ್ರಹಿಸಿ ಬಹುಕಾಲದಿಂದಲೂ ಹೋರಾಟಗಳು ನಡೆಯುತ್ತಲಿದೆ. ತಾಲೂಕು ಕೇಂದ್ರವನ್ನಾಗಿ ಮಾಡಲು ಬೇಕಾದ ಎಲ್ಲಾ ಅರ್ಹತೆಗಳಿದ್ದರೂ ನಮ್ಮ ವಿಟ್ಲ ವನ್ನು ತಾಲೂಕನ್ನಾಗಿ ಮಾಡುವ ಕೆಲಸ ಇನ್ನೂ ಆಗಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಜನ ಜಾಗೃತಿ ಮಾಡುವ ನಿಟ್ಟಿನಲ್ಲಿ ಜೂ.೨೩ರಂದು ವಿಟ್ಲ ದ ಜೈನ ಬಸದಿಯಿಂದ ನಾಡಕಚೇರಿವರೆಗೆ ಸಾಂಕೇತಿಕ ವೇಗ ಜಾಥ ನಡೆಯಲಿದೆ ಎಂದು ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಸಮಿತಿ ಕಾರ್ಯದರ್ಶಿ ಕಾನಾ ಈಶ್ವರ ಭಟ್ ರವರು ಹೇಳಿದರು.

ಅವರು ಜೂ.೧೮ರಂದು‌ ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಲ್ಲಾ ಪಕ್ಷದವರನ್ನು‌ ಸೇರಿಸಿಕೊಂಡು ರಾಜಕೀಯ ರಹಿತವಾಗಿ ನಮ್ಮ ಹೋರಾಟವಾಗಿದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ರವರಿಗೆ ಮನವಿ ಮಾಡಿದ್ದೇವೆ. ಅವರು ಸಾಧಕ ಭಾದಕಗಳನ್ನು ನೋಡಿಕೊಂಡು ಮಾಡುವುದಾಗಿ‌ ಭರವಸೆ ನೀಡಿದ್ದಾರೆ. ಅದೇ ರೀತಿ
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ರವರಿಗೆ ಮುಂದಿನ ದಿನಗಳಲ್ಲಿ ಮನವಿ ನೀಡಲಾಗುವುದು. ಈ ಕುರಿತಾಗಿ ಸಂಬಂದಪಟ್ಟ ಇಲಾಖೆಗಳಿಗೆ ಮನವಿ ಮಾಡಲಾಗಿದೆ.

ದ.ಕ.ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕು ೭೫ ಗ್ರಾಮಗಳನ್ನು ಹೊಂದಿದ್ದು ಜಿಲ್ಲೆಯಲ್ಲಿ ಅತೀ ದೊಡ್ಡ ತಾಲೂಕಾಗಿದೆ‌‌. ಅದನ್ನು ವಿಭಜಿಸಿ ವಿಟ್ಲ ತಾಲೂಕು ರಚನೆ ಮಾಡಬೇಕಿದೆ. ಕರೋಪಾಡಿ, ಕನ್ಯಾ‌ನ, ಪೆರುವಾಯಿ, ಮಾಣಿಲ, ಕೇಪು, ಪುಣಚ, ಬಿಳಿಯೂರು, ಕುಳ, ವಿಟ್ಲ ಮುಡ್ನೂರು, ಕೊಳ್ನಾಡು, ಸಾಲೆತ್ತೂರು‌ ಗ್ರಾಮಗಳ ಜನರು‌ ತಮ್ಮ ಜಮೀನುಗಳಿಗೆ ಸಂಬಂದಪಟ್ಟ ಸರಕಾರಿ ಕೆಲಸಗಳಿಗೆ ಸುಮಾರು ೨೫ ಕಿ.ಮೀ. ನಿಂದ ೫೦ ಕಿ.ಮೀ. ವರೆಗೆ ಕ್ರಮಿಸಿ ಬಂಟ್ವಾಳ ತಾಲೂಕು ಕಚೇರಿಗೆ ಹೋಗಬೇಕಿದೆ. ಆದ್ದರಿಂದ ಗಡಿನಾಡ ಈ ಪ್ರದೇಶದ ಏಳಿಗೆಗಾಗಿ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ವಿಟ್ಲ ತಾಲೂಕು ರಚಿಸುವುದು ಅಗತ್ಯ ಹಾಗೂ ಅನಿವಾರ್ಯ ಎಂದವರು ಹೇಳಿದರು‌. ಅದೇ ರೀತಿ ಈ ಹಿಂದೆ ಇದ್ದ ವಿಟ್ಲ ವಿಧಾನಸಭಾ ಕ್ಷೇತ್ರವು ಕಣ್ಮರೆಯಾಗಿದೆ. ಅದನ್ನು ಮರಳಿ ಪಡೆಯುವ ನಿಟ್ಟಿನಲ್ಲಿಯೂ ನಮ್ಮ ಹೋರಾಟ ಮುಂದುವರೆಯಲಿದೆ. ಇದಕ್ಕೆ ಎಲ್ಲ ವರ್ಗದ ಜನರು ಸಹಕಾರ ನೀಡಬೇಕೆಂದು ಅವರು ವಿನಂತಿಸಿದರು.

ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾನಾಥ‌ ವಿಟ್ಲರವರ ಮಾತನಾಡಿ ಈ ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರ ಇದ್ದ ಕಾಲದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ವಿಟ್ಲ ಪ್ರತ್ಯೇಕ ಆದರೆ ಬಹಳಷ್ಟು ಪ್ರಯೋಜನ ಇದೆ. ನಮ್ಮ ಹೋರಾಟ‌ ಸಮಿತಿ ನಮ್ಮಿಂದ‌ ಮೊದಲೇ ಪ್ರಾರಂಬಿಸಲಾಗಿತ್ತು, ಸಂಬಂದಪಟ್ಟ ವರದಿಯನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೆಲವೊಂದು ಗ್ರಾಮಗಳವರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ನಮ್ಮ ಹೋರಾಟಕ್ಕೆ ಹಿನ್ನಡೆಯಾಯಿತು. ನಮ್ಮ ಪ್ರಯತ್ನ ನಿರಂತರವಾಗಿ ನಡೆಯಲಿದೆ. ಹಲವಾರು ಹಿರಿಯರು ಸೇರಿಕೊಂಡು ಈ ಒಂದು ಕಾರ್ಯದಲ್ಲಿ ಮುಂದಡಿ‌ ಇಟ್ಟಿದ್ದೇವೆ. ಈ ಒಂದು ವಿಟ್ಲವನ್ನು ತಾಲೂಕು ಮಾಡುವುದು ಹಲವರ ಕನಸಾಗಿದೆ. ಅದೇ ರೀತಿ ನಮ್ಮ ವಿಟ್ಲ ವಿಧಾನ ಸಭಾ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನ ನಡೆಸಲಾಗುವುದು. ಇದಕ್ಕೆ ಈ ಭಾಗದ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಸಮಿತಿ
ಅಧ್ಯಕ್ಷರಾದ ಬಿ.ಕೆ.ಬಶೀರ್, ಉಪಾಧ್ಯಕ್ಷರಾದ ಹಸೈನಾರ್, ಸಂಚಾಲಕರಾದ ರಾಮಣ್ಣ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!