ವಿಟ್ಲ-ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿ ನೂತನವಾಗಿ LABANZA ಶುಭಾರಂಭ: ವಿಟ್ಲದಲ್ಲಿ ಪ್ರಪ್ರಥಮವಾಗಿ ಅದ್ದೂರಿ ಯಾಗಿ ಚಾಲನೆಗೊಂಡ LABANZA
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿಯಲ್ಲಿ ನೂತನವಾಗಿ LABANZA ಶುಭಾರಂಭಗೊಂಡಿತು.


ವಿಟ್ಲದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರೋಯಲ್ ಬೇಕ್ & ಕೆಫೆ ಗ್ರಾಹಕರ ಮನಗೆದ್ದು ಯಶಸ್ವಿಯಾಗಿದೆ. ವಿಟ್ಲದ ಜನತೆಗೆ ಇನ್ನಷ್ಟು ಸೇವೆ ನೀಡಲು ಇವರ ಇನ್ನೊಂದು ಸಂಸ್ಥೆ LABANZA ಸಜ್ಜುಗೊಂಡಿದೆ.
ಸಮಸ್ತ ಕೇರಳ ಜಮೀಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಖರೀಬ್ ಮಹಮ್ಮದ್ ರಫೀಕ್ ಅಹ್ಸನಿ, ಕೆಲಿಂಜ ಜುಮಾ ಮಸೀದಿ ಖತೀಬ್ ಮಹಮ್ಮದ್ ಅಲಿ ಫೈಝಿ ಎಂ.ಎಸ್.ಮಹಮ್ಮದ್, ಶಾಕಿರ್ ಅಳಕೆಮಜಲು, ಎಂ.ಎಸ್ ಮುಹಮ್ಮದ್, ಟಿ.ಕೆ.ಮಹಮ್ಮದ್, ಹಮೀದ್ ಕೆ.ಎಸ್, ಹಾಜಿ ಅಶ್ರಫ್ ಒಕ್ಕೆತ್ತೂರು, ಹಸೈನಾರ್ ಹಾಜಿ ಒಕ್ಕೆತ್ತೂರು, ಹಮೀದ್ ಲಕ್ಸುರಿ, ಮಹಮ್ಮದ್ ಅಲಿ, ಉಬೈದ್ ವಿಟ್ಲ, ರಾಝಿಕ್ ಒಕ್ಕೆತ್ತೂರು ಉಪಸ್ಥಿತರಿದ್ದರು.
ಪಾಲುದಾರ ಮಹಮ್ಮದ್ ಅಲಿ, ದಾವೂದ್ ಒಕ್ಕೆತ್ತೂರು, ಖಲೀಲ್, ಸಯಾಫ್ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




