June 12, 2026

7 ವರ್ಷದ ಬಾಲಕ ಶವವಾಗಿ ಪತ್ತೆ: ಕೊಲೆ ಶಂಕೆ

0
image_editor_output_image1730856550-1781254801714.jpg

ದಾವಣಗೆರೆ: ಮಾವನ ಜೊತೆ ಜೇನು  ಮುರಿಯಲು ಹೋಗಿದ್ದ 7 ವರ್ಷದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ದಾವಣಗೆರೆ  ಜಿಲ್ಲೆಯ ಜಗಳೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಶಿನಾಯ್ಕ್ ಎಂಬವರ ಪುತ್ರ ಆದಿತ್ಯ (7) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಬುಧವಾರ ಬೆಳಗ್ಗೆ ಮಾವ ತಾವರೆನಾಯ್ಕ್ ಜೊತೆ ಬಾಲಕ ಜೇನು ಮುರಿದುಕೊಂಡು ಬರಲು ಹೋಗಿದ್ದ.

ಸಂಜೆಯಾದರೂ ಇಬ್ಬರು ಮನೆಗೆ ಬಾರದ ಹಿನ್ನೆಲೆ ಜಗಳೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಗ್ರಾಮದ ಪಕ್ಕದ ಹಳ್ಳದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಾವ ತಾವರೆನಾಯ್ಕ್ ಬಾಲಕನನ್ನು ಕೊಲೆ ಮಾಡಿ ಬಿಸಾಕಿ ಹೋಗಿದ್ದಾನೆ ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!