ವಿಟ್ಲ; ಹೊರೈಝನ್ ಶಾಲೆ ಪ್ರಾರಂಭೋತ್ಸವ,ತರಗತಿ ಕೊಠಡಿ ಉದ್ಘಾಟನೆ.
ವಿಟ್ಲ; ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಪ್ರಾರಂಭೋತ್ಸವ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳ ಕೊಠಡಿ ಉದ್ಘಾಟನೆ ನಡೆಯಿತು.
ಶಾಲೆಯ ಅಧ್ಯಕ್ಷ ಅಝೀಝ್ ಸನ ತರಗತಿಗಳನ್ನು ಉದ್ಘಾಟಿಸಿದರು.
ಸದರ್ ಉಮರ್ ಸಅದಿ ದುವಾ ಮೂಲಕ ತರಗತಿಗಳಿಗೆ ಚಾಲನೆ ನೀಡಿದರು.
ಶಾಲೆಯ ಕಾರ್ಯದರ್ಶಿ ನೋಟರಿ ಅಬೂಬಕರ್,ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ,ಟ್ರಸ್ಟಿಗಳಾದ ಝುಬೈರ್ ಮಾಸ್ಟರ್,ಅಬ್ದುಲ್ ಹಮೀದ್ ಬದ್ರಿಯಾ,ಇಕ್ಬಾಲ್ ಶೀತಲ್,ಮಸೀದಿ ಉಪಾಧ್ಯಕ್ಷ ಮಹಮ್ಮದ್ ಗಮಿ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಶಾಲಾ ಹಾಗೂ ಮದರಸ ಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಮನಾಃಝಿರ್ ಮುಡಿಪು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು




