June 8, 2026

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಆರೋಪಿಯ ಬಂಧನ

0
image_editor_output_image-147110586-1780911966686.jpg

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿಂದಿ ಆಯುವವನ ಮೇಲೆ ವೈಟ್‌ಫೀಲ್ಡ್  ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಜೂನ್ 2ರಂದು ಪಟ್ಟಂದೂರು ಅಗ್ರಹಾರದಲ್ಲಿ ಘಟನೆ ನಡೆದಿತ್ತು. ಕೋ ಲಿವಿಂಗ್ ಪಿಜಿಯಲ್ಲಿ ವಾಸವಾಗಿದ್ದ ಕಾಲೇಜು ವಿದ್ಯಾರ್ಥಿನಿ ಓದುತ್ತಿದ್ದ ವೇಳೆ ನಿದ್ದೆ ಬರುತ್ತಿದೆ ಎಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟೀ ಕುಡಿಯಲು ಹೋಗಿದ್ದಳು. ಟೀ ಕುಡಿದು ವಾಪಸ್ಸಾಗುವ ವೇಳೆ ವಿದ್ಯಾರ್ಥಿನಿಯನ್ನ ಆರೋಪಿ ಸೈಬುಲ್ ಮಂಡಲ್ ಹಿಂಬಾಲಿಸಿದ್ದ.

ಇದನ್ನು ಗಮನಿಸಿದ ವಿದ್ಯಾರ್ಥಿನಿ ಭಯದಿಂದ ಪಿಜಿ ಸೇರಿಕೊಳ್ಳಲು ಓಡಿ ಬಂದಿದ್ದಳು. ಆದರೆ ಪಿಜಿಯ ಗೇಟ್ ಬಳಿಯಿಂದಲೇ ವಿದ್ಯಾರ್ಥಿನಿಯ ಕುತ್ತಿಗೆ ಹಿಸುಕಿ ಆರೋಪಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಸಮೀಪದ ಶೆಡ್ ಒಂದಕ್ಕೆ ಎತ್ತೊಯ್ದು ಅತ್ಯಾಚಾರವೆಸಗಲು ಯತ್ನಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!