June 8, 2026

ಈಜಲು ಹೋಗಿದ್ದ ಬಾಲಕ  ನೀರಿನಲ್ಲಿ ಮುಳುಗಿ ಸಾವು

0
image_editor_output_image1494373025-1780911419416.jpg

ಬೆಳಗಾವಿ: ಈಜಲು ಹೋಗಿದ್ದ ಬಾಲಕ  ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ  ತಾಲೂಕಿನ ವಕ್ಕುಂದ ಹೊರವಲಯದ ಮಲಪ್ರಭಾ ನದಿಯಲ್ಲಿ ನಡೆದಿದೆ.

ಈಜಲು ತೆರಳಿದ್ದ 15 ವರ್ಷದ ಮಹೇಶ್ ಗಣಾಚಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನ ಮೃತದೇಹ ನೀರಿನಿಂದ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!