June 9, 2026

ಕಾಸರಗೋಡು: ಶೌಚಾಲಯಕ್ಕೆ ಅಗೆದಿದ್ದ ಹೊಂಡಕ್ಕೆ ಬಿದ್ದು 6 ವರ್ಷದ ಬಾಲಕ ಮೃತ್ಯು

0
image_editor_output_image-726043060-1780911145083.jpg

ಕಾಸರಗೋಡು: ಶೌಚಾಲಯಕ್ಕೆ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಇಲ್ಲಿನ ಮಧೂರು ಮಂಜತ್ತಡ್ಕದ ಮುಹಮ್ಮದ್ ಸಾಜಿದ್ ಅವರ ಪುತ್ರ ಮುಹಮ್ಮದ್ ಅಯಾನ್ ಮೃತಪಟ್ಟವನು.

ಆಟವಾಡುತ್ತಿದ್ದ ಬಾಲಕ ನಿರ್ಮಾಣ ಹಂತದ ಮನೆಯ ಶೌಚಾಲಯ ಗುಂಡಿಗೆ ಬಿದ್ದಿದ್ದು, ಬಾಲಕ ನಾಪತ್ತೆಯಾದುದರಿಂದ ಮನೆಯವರು ಹುಡುಕಾಡಿದಾಗ ನೀರು ತುಂಬಿದ ಹೊಂಡಕ್ಕೆ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!