ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ಪಲ್ಟಿ
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಉಳ್ಳಾಲ ತಾಲೂಕಿನ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಚಾಲಕ ಹಾಗೂ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ರಿಕ್ಷಾದಲ್ಲಿ ಚಾಲಕ ಸಹಿತ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು, ರಾತ್ರಿ ಸುಮಾರು 2 ಗಂಟೆ ವೇಳೆ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಉದ್ಯಾವರ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಹೋಗಿ ವಾಪಸು ಚಟ್ಟೆಕಲ್ಲು ಮನೆಗೆ ಬರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದ ರಿಕ್ಷಾ ರಸ್ತೆಯಿಂದ ಪಕ್ಕದ ತೋಟಕ್ಕೆ ಪಲ್ಟಿಯಾಗಿದೆ.





