September 26, 2026

ಕ್ಯಾನ್ಸ‌ರ್ ನಿಂದ ಬಳಲುತ್ತಿದ್ದ ಉಡುಪಿಯ ಎಆರ್‌ಎಸ್‌ಐ ನಾಗೇಶ್ ನಿಧನ

0
image_editor_output_image487853573-1778239287450.jpg

ಉಡುಪಿ ಡಿಎಆರ್‌ನಲ್ಲಿ ಎಆರ್‌ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗೇಶ್ ಎಂ ಅವರು ಕ್ಯಾನ್ಸ‌ರ್ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನ ಹೊಂದಿದರು.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪದ್ಮನೂರು, ಕಿನ್ನಿಗೋಳಿ ನಿವಾಸಿಯಾಗಿದ್ದ ಅವರು ಪ್ರಸ್ತುತ ಉಡುಪಿಯಲ್ಲಿ ವಾಸವಾಗಿದ್ದರು.

 

ನಾಗೇಶ್ ಎಂ ಅವರು 1996ರ ಅಕ್ಟೋಬರ್ 10 ರಂದು ಮಂಗಳೂರಿನ ಡಿಎಆರ್‌ನಲ್ಲಿ ಸೇವೆಗೆ ನೇಮಕಗೊಂಡಿದ್ದರು. ಬಳಿಕ ಹೊಸದಾಗಿ ಉಡುಪಿ ಜಿಲ್ಲೆ ರಚನೆಯಾದ ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. 2016 ರ ಡಿಸೆಂಬರ್ 17 ರಂದು ಪದೋನ್ನತಿ ಹೊಂದಿ ಎಆರ್‌ಎಸ್‌ಐ ಹುದ್ದೆಗೆ ಏರಿಕೆಯಾಗಿದ್ದರು. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!