May 8, 2026

ಮಂಗಳೂರು: ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ನಿಧನ

0
image_editor_output_image1725780007-1778234655272.jpg

ಮಂಗಳೂರು: ಶಿಕ್ಷಣ ತಜ್ಞರು, ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಸಾವಿರಾರು ಶಿಷ್ಯರನ್ನು ರೂಪಿಸಿದ್ದ ಗೌರವಾನ್ವಿತ ಜೆಸ್ಯೂಟ್ ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ಎಸ್.ಜೆ (86) ಅವರು ಶುಕ್ರವಾರ ಮುಂಜಾನೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಬಗ್ಗೆ ಫಾತಿಮಾ ರಿಟ್ರೀಟ್ ಹೌಸ್‌ನ ಸುಪೀರಿಯರ್ ಫಾದರ್ ಐವನ್ ಮೆಂಡೋನ್ಸಾ ಎಸ್.ಜೆ ಮಾಹಿತಿ ನೀಡಿದ್ದು, “ಫಾದರ್ ಕಾಮತ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಮೂಗಿನ ಮೂಲಕ ಆಹಾರ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3:45ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಫಾದರ್ ಕಾಮತ್ ಅವರ ಅಂತ್ಯಕ್ರಿಯೆಯ ವಿವರಗಳನ್ನು ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭಾನುವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!