ಉಳ್ಳಾಲ ಪುರಸಭೆಯ ಮಾಜಿ ಉಪಾಧ್ಯಕ್ಷೆ ನಿಧನ
ಉಳ್ಳಾಲ : ಉಳ್ಳಾಲ ಪುರಸಭೆಯ ಮಾಜಿ ಉಪಾಧ್ಯಕ್ಷೆ ಭವಾನಿ (70) ಅಲ್ಪಕಾಲದ ಅಸೌಖ್ಯದಿಂದ ನಗರದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿಯಾದ ಭವಾನಿ ಅವಿವಾಹಿತರಾಗಿದ್ದು, ಬಿಜೆಪಿಯ ಸಕ್ರಿಯ ಮಹಿಳಾ ಸದಸ್ಯೆಯಾಗಿದ್ದರು. ಪುಲ್ಕೆದಡಿ ಆದಿ ಕ್ಷೇತ್ರ ಬಂಡಿಕೊಟ್ಯ ಕೋರ್ದಬ್ಬು ದೈವಸ್ಥಾನದ ಸಮಿತಿಯಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು.
ಉಳ್ಳಾಲ ಪುರಸಭೆಗೆ ಎರಡು ಬಾರಿ ಕೌನ್ಸಿಲರ್ ಆಗಿ ಆಯ್ಕೆಗೊಂಡು ಒಂದು ಬಾರಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು.





