May 7, 2026

ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ

0
image_editor_output_image-579160718-1778146928327.jpg

ಉಡುಪಿ ಜಿಲ್ಲೆಯಲ್ಲಿ ತೀವ್ರ ಬಿಸಿಲಿನ ತಾಪ ಜನರನ್ನು ಕಂಗೆಡಿಸಿದ್ದ ನಡುವೆ, ಗುರುವಾರ ಬೆಳಗ್ಗೆ ಸುರಿದ ಗುಡುಗು ಸಹಿತ ಮಳೆಯು ಜನರಿಗೆ ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ನೀಡಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಗಿನ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಬಳಿಕ ಗುಡುಗು ಹಾಗೂ ಗಾಳಿ ಸಹಿತ ಉತ್ತಮ ಮಳೆಯಾಯಿತು. ಮಳೆಯ ಪರಿಣಾಮವಾಗಿ ಉಷ್ಣಾಂಶದಲ್ಲಿ ಇಳಿಕೆ ಕಂಡುಬಂದಿದ್ದು, ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರು ತಂಪಿನ ಅನುಭವ ಪಡೆದರು.

Leave a Reply

Your email address will not be published. Required fields are marked *

error: Content is protected !!