April 25, 2026

ಬಂಟ್ವಾಳ: ವಿದ್ಯುತ್ ತಂತಿ ತಗುಲಿ ಬಾಲಕ ಮೃತ್ಯು

0
n7098872431777128060559a2ba8512f392c69ebee75a4d1abacb23a463883454df50804b352d72c9ef907c.jpg

ಬಂಟ್ವಾಳ: ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಗಡಿಯಾರ ಎಂಬಲ್ಲಿ ನಡೆದಿದೆ.

ನೇರಳಕಟ್ಟೆ ಸಮೀಪದ ಕೊಡಾಜೆ ನಿವಾಸಿ ಶಹೀರ್ (15 ವ) ಮೃತಪಟ್ಟ ಬಾಲಕ.

ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್ ನಲ್ಲಿ ಬಾಡಿಗೆ ಮನೆಯಲ್ಲಿರುವ ಶರೀಫ್ ಅವರ ಪುತ್ರ ಶಹೀರ್ ಅವರು ಶಾಲೆಗೆ ರಜೆಯಾಗಿದ್ದರಿಂದ ಗಡಿಯಾರದಲ್ಲಿರುವ ಅಜ್ಜನ ಮನೆಯಲ್ಲಿದ್ದರು.

ಇಂದು ಬೆಳಿಗ್ಗೆ ಶಹೀರ್ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈತ ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!