ಎಸ್ ಎಸ್ ಎಲ್ ಸಿ ಫಲಿತಾಂಶ: ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೀಹರಿ 598(95%) ಅಂಕ
ವಿಟ್ಲ: ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶ್ರೀಹರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ರಲ್ಲಿ 598 ಅಂಕ ಪಡೆಯುವ ಮೂಲಕ ಶೇ. 95 ಅಂಕಗಳಿಂದ ಉತ್ತೀರ್ಣರಾಗಿದ್ದಾರೆ.
ಕನ್ನಡ 124, ಇಂಗ್ಲೀಷ್ 99, ಹಿಂದಿ 96, ಗಣಿತ 91, ವಿಜ್ಞಾನ 90, ಸಮಾಜ ವಿಜ್ಞಾನ 98 ಅಂಕಗಳನ್ನು ಪಡೆದಿರುತ್ತಾನೆ. ಈತ ವಿಟ್ಲದ ಕಲ್ಲಕಟ್ಟ ನಿವಾಸಿ ಮೋಹನದಾಸ್ ಪೂಜಾರಿ ಮತ್ತು ಕವಿತಾ ದಂಪತಿಗಳ ಪುತ್ರ. ಈತ ವಿಟ್ಲದ ಶಾಲಾ ರಸ್ತೆಯಲ್ಲಿರುವ ಮೋತಿ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ನಾಲೇಡ್ಜ್ ಹಬ್ ನಲ್ಲಿ ಟ್ಯೂಷನ್ ಪಡೆದಿದ್ದ.





