SSLC ಪರೀಕ್ಷೆ: ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ 100 ಶೇ. ಫಲಿತಾಂಶ
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೇಂದ್ರ ಜುಮಾ ಮಸೀದಿ ವಿಟ್ಲ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ ಶೇ.100 ಫಲಿತಾಂಶ ದಾಖಲಿಸಿದೆ. ಎನ್. ಫಾತಿಮ 600 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿರುತ್ತಾಳೆ.

ಮುಹಮ್ಮದ್ ಆಸಿಕ್ 599, ಇಬ್ರಾಹಿಂ ಅನಸ್ 592, ಹಿಝ್ಝಾ ಫಾತಿಮ 585, ಮುನೀರಾ 569, ಆಮಿನತ್ ರಶ 552, ನಾಝಿಯಾ ಬಾನು 550, ಮನಾಲ್ ಶೈಖ್ 543, ಆಯಿಷ ನಿಶ್ಮ 543, ಇಸ್ಮಾಯಿಲ್ ಹಂದನ್ 542, ಫಾತಿಮತ್ ತಬ್ಶೀರಾ 542, ಆಯಿಷಾ ತಸ್ನೀಮಾ 539, ಮುಹಮ್ಮದ್ ರಾಝಿ 536, ಶಝಾ ಫಾತಿಮ 534, ನಫೀಸಾ ಝುಲ್ಫಾ 532 ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ಉತ್ತೀರ್ಣ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಶಾಲೆಯು ಪ್ರಕಟನೆಯಲ್ಲಿ ತಿಳಿಸಿರುತ್ತದೆ.





