April 16, 2026

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಶಾಲೆಯ ಬಳಿಯ ಗುಡ್ಡಕ್ಕೆ ಬೆಂಕಿ

0
IMG-20260416-WA0000.jpg

ವಿಟ್ಲ: ಕಂಬಳಬೆಟ್ಟು ಬದನಾಜೆ ಎಂಬಲ್ಲಿರುವ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಎಕ್ರೆಗಟ್ಟಲೇ ಗಿಡಮರಗಳು ನಾಶಗೊಂಡಿದೆ.

ವಿಟ್ಲ-ಪುತ್ತೂರು ರಸ್ತೆಗೆ ತಾಗಿಕೊಂಡಿರುವ ಬದನಾಜೆ ಎಂಬಲ್ಲಿರುವ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಯಾರೂ ಕೂಡಾ ಗಮನಿಸಿರಲಿಲ್ಲ.‌ ಇದೀಗ ಬೆಂಕಿ ತೀವ್ರತೆ ಹೆಚ್ಚಾಗಿ ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಹಿಂಬದಿ ವರೆಗೆ ಆವರಿಸಿಕೊಂಡು ಬಂದಿದೆ. ಶಾಲೆಯ ಹಿಂಬದಿ ಗುಡ್ಡದಲ್ಲಿ ಘಟನೆ ನಡೆದಿದ್ದು, ಶಾಲೆಗೆ ಯಾವುದೇ ಅಪಾಯ ಇಲ್ಲ. ಶಾಲಾ ಪ್ರಾಂಶುಪಾಲ ಲಿಬಿನ್ ಝೇವಿಯರ್ ಅವರು ಪುತ್ತೂರು ಅಗ್ಮಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ನಂದಿಸುವ ಕಾರ್ಯ ನಡೆಯುತ್ತಿದೆ.‌

Leave a Reply

Your email address will not be published. Required fields are marked *

error: Content is protected !!