ಉಡುಪಿ: ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಲೆಸ್ಲಿ ಕ್ಲಿಫರ್ಡ್ ಡಿಸೋಜಾ ನೇಮಕ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಶಿರ್ವ ವಲಯದ ಪ್ರಧಾನ ಧರ್ಮಗುರು ಹಾಗೂ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ರೆ| ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ವಿಶ್ವಗುರು 14ನೇ ಪೋಪ್ ಅವರು ಅಧಿಕೃತವಾಗಿ ನೇಮಕಗೊಳಿಸಿದ್ದಾರೆ.
ರೆ| ಡಾ| ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಧರ್ಮ ಪ್ರಾಂತ್ಯದ ಎರಡನೇ ಧರ್ಮಾಧ್ಯಕ್ಷರಾಗಿ ಪೋಪ್ ಅವರಿಂದ ಆರಿಸಲ್ಪಟ್ಟಿದ್ದು, ಅವರ ದೀಕ್ಷಾ ಕಾರ್ಯಕ್ರಮ ಎಪ್ರಿಲ್ 20 ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.




