ಜಮಿಯತುಲ್ ಫಲಾಹ್ ಬಂಟ್ವಾಳ ಘಟಕ ಸದಸ್ಯರಿಗೆ ಜನಪ್ರಿಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಬಂಟ್ವಾಳ: ಜಮೀಯತುಲ್ ಫಲಾಹ್ ಬಂಟ್ವಾಳ ಘಟಕದ ಸದಸ್ಯರಿಗೆ ಮಂಗಳೂರಿನ ಪಡೀಲ್ ಜನಪ್ರಿಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಜಮೀಯತುಲ್ ಫಲಾಹ್ ಸ್ಥಾಪಕ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಬಂಟ್ವಾಳ ಘಟಕ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ ಬೋಳಂತೂರು, ಕಾರ್ಯದರ್ಶಿ ಹಕೀಂ ಕಲಾಯಿ, ಜನಪ್ರಿಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರೂಖ್ ಅಬ್ದುಲ್ಲಾ, ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ, ಎಂಒಡಿ ಇಕ್ಬಾಲ್, ಪಿಆರ್ ಒ ಬಾತಿಷ್ ಅಳಕೆಮಜಲು, ಜಮಿಯತುಲ್ ಫಲಾಹ್ ಬಂಟ್ವಾಳ ಘಟಕದ ಕೆ. ಆಸಿಫ್ ಇಕ್ಬಾಲ್, ಬಿ.ಎಂ. ತುಂಬೆ, ಮೊಹಮ್ಮದ್ ಕೆ.ಎಸ್., ಶೇಖ್ ರಹಮತುಲ್ಲಾಹ್, ಆಶಿಕ್ ಕುಕ್ಕಾಜೆ, ಪಿ. ಮೊಹಮ್ಮದ್, ಮೊಹಮ್ಮದ್ ಸಾಗರ್, ಹಾಜಿ ಜಿ.ಅಬ್ದುಲ್ ರಝಾಕ್, ಎಸ್.ಎಂ.ಬಾಷ, ಡಿ.ಪಿ.ಸಿದ್ದೀಕ್ ಹಾಜಿ, ಟಿ.ಕೆ.ಬಶೀರ್, ಯಾಸಿರ್ ಕಲ್ಲಡ್ಕ, ಮೊಹಮ್ಮದ್ ನಾರಂಕೋಡಿ, ಬಶೀರ್ ವಗ್ಗ, ಡಿ.ಅಬ್ದುಲ್ ಹಮೀದ್ ಕೆ.ಅಶ್ರಫ್ ಸಾಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು.





