ಇಂದು ಏಪ್ರಿಲ್ 4 ಮಂಗಳೂರಿನ ಕಂಕನಾಡಿ ಗೇಟ್ ವಾಣಿಜ್ಯ ಸಂಕೀರ್ಣ ದಲ್ಲಿ “ಬ್ರೇಸ್ ಮ್ಯಾಕ್ಸ್ ಡೆಂಟಲ್ಸ್” ದಂತ ಚಿಕಿತ್ಸಾಲಯ ಶುಭಾರಂಭ
ಬಂಟ್ವಾಳ ತಾಲೂಕಿನ ಮಾಣಿಯ ಕೊಡಾ ಜೆ ಮೂಲದ ಡಾ. ಅಶ್ರಫ್ ಮತ್ತು ಪತ್ನಿ ಡಾ. ಮೆಹನಾಜ್ ಮಾಲಕತ್ವದಲ್ಲಿ ಮಂಗಳೂರಿನ ಕಂಕನಾಡಿಯಲ್ಲಿರುವ ಕಂಕನಾಡಿ ಗೇಟ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಸುಸಜ್ಜಿತವಾಗಿ ವಾಗಿ ಎಲ್ಲಾ ಚಿಕಿತ್ಸಾ ಸಲಕರಣೆಗಳೊಂದಿಗೆ ರೂಪುಗೊಂಡಿರುವ ಬ್ರೇಕ್ ಮ್ಯಾಕ್ಸ್ ಡೆಂಟಲ್ಸ್ ದಂತ ಚಿಕಿತ್ಸಾಲಯವು ಶನಿವಾರ ಶುಭ ಆರಂಭಗೊಳ್ಳಲಿದೆ.
ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭಾಧ್ಯಕ್ಷರಾಗಿರುವ ಯು .ಟಿ. ಖಾದರ್ ರವರು ಮಾಡಲಿದ್ದು ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ ಹಾಗೆಯೇ ಖ್ಯಾತ ವೈದ್ಯರುಗಳು ಮತ್ತು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕ್ಲಿನಿಕ್ ಮಾಲಕರಾದ ಡಾಕ್ಟರ್ ಅಶ್ರಫ್ ಕೊದಾಜೆ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


