April 3, 2026

ಕಾಂಗ್ರೆಸ್‌ನ ರೈತ ಮೋರ್ಚಾ ಮುಖಂಡನ ಮೃತದೇಹ  ಹೆದ್ದಾರಿ ಬಳಿ ಪತ್ತೆ

0
image_editor_output_image-1417279424-1775194246501.jpg

ಚಿತ್ರದುರ್ಗ: ಜನಪರ ಕೆಲಸ ಮಾಡುತ್ತಾ ಭಾರೀ ಹೆಸರು ಮಾಡಿದ್ದ ಕಾಂಗ್ರೆಸ್‌ನ ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) ಅವರ ಶವ ಅನುಮಾನಾಸ್ಪದವಾಗಿ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾಗಿದೆ.

ಚಿತ್ರದುರ್ಗದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ಶಿವಲಿಂಗಪ್ಪ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಸಂಬಂಧಿಗಳು, ಸ್ನೇಹಿತರು ಹಾಗೂ ನೆಂಟರಿಷ್ಟರ ಮನೆಗಳಲ್ಲಿ ವಿಚಾರಿಸಿದರೂ ಶಿವಲಿಂಗಪ್ಪ ಪತ್ತೆಯಾಗಿರಲಿಲ್ಲ. ಅವರ ಸೋದರ ಅಳಿಯ ಬಸವರಾಜ್ ಚಿತ್ರದುರ್ಗದ ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!