ಉಡುಪಿ: ಗಡಿಪಾರು ಆರೋಪಿಯ ಬಂಧನ
ಉಡುಪಿ: ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಹೊರಜಿಲ್ಲೆಗೆ ಗಡಿಪಾರು ಆದೇಶ ಪಡೆದು, ಆದೇಶದ ಪ್ರತಿ ಜಾರಿ ಮಾಡಲು ಬಂದ ಪೊಲೀಸರನ್ನು ಯಾಮಾರಿಸಿ ಓಡಿ ಹೋಗಿದ್ದ ಫೈಝಲ್ ಎಂಬ ಆರೋಪಿಯನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹೊರ ಜಿಲ್ಲೆಗೆ ಗಡಿಪಾರು ಆದೇಶವನ್ನು ಜಾರಿ ಮಾಡಲು ಹೋದ ವೇಳೆ ಆರೋಪಿ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿರು ವುದನ್ನು ಖಚಿತಪಡಿಸಿಕೊಂಡು ಮಲ್ಪೆ ಪೊಲೀಸರು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಹೋದಾಗ, ಆರೋಪಿ ತಾನು ಕುಳಿತಿದ್ದ ಕಾರನ್ನು ಒಮ್ಮೆಗೆ ಹಿಮ್ಮುಖವಾಗಿ ಚಲಾಯಿಸಿ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಓಡಿ ಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




