March 30, 2026

ಒಣಗಿದ ದಾಸವಾಳದ ಹೂವನ್ನು ನುಂಗಿ ಆರುವರೆ ತಿಂಗಳ ಮಗು ಸಾವು

0
image_editor_output_image1707026898-1774871213360.jpg

ಮೈಸೂರು: ಆಟವಾಡುತ್ತಾ ಆಕಸ್ಮಿಕವಾಗಿ ಒಣಗಿದ ದಾಸವಾಳದ ಹೂವನ್ನು ನುಂಗಿದ ಆರುವರೆ ತಿಂಗಳ ಹಸುಗೂಸೊಂದು ಉಸಿರುಗಟ್ಟಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದೆ.

ದೊಡ್ಡ ಹೆಜ್ಜೂರು ಗ್ರಾಮದ ಆರುವರೆ ತಿಂಗಳ ಮಗು ಚಿನ್ಮಯಿಗೌಡ ಮೃತಪಟ್ಟ ದುರ್ದೈವಿ. ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇರಿಸಲಾಗಿದ್ದ ಒಣಗಿದ ದಾಸವಾಳದ ಹೂವು ಮಗುವಿನ ಕೈಗೆ ಸಿಕ್ಕಿದೆ. ಮಗು ಆಟವಾಡುತ್ತಾ ಅದನ್ನು ಬಾಯಿಗೆ ಹಾಕಿಕೊಂಡ ಪರಿಣಾಮ, ಹೂವು ಗಂಟಲಿನಲ್ಲಿ ಸಿಲುಕಿಕೊಂಡಿದೆ.

ಇದರಿಂದಾಗಿ ಮಗುವಿಗೆ ತಕ್ಷಣವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪೋಷಕರು ಕೂಡಲೇ ಮಗುವನ್ನು ಗಮನಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಮಗು ಅಸುನೀಗಿದೆ. ಮಗುವಿನ ಗಂಟಲಿನಲ್ಲಿ ಒಣಗಿದ ದಾಸವಾಳದ ಹೂವು ಸಿಲುಕಿದ್ದರಿಂದ ಉಸಿರುಗಟ್ಟುವಿಕೆ (Asphyxiation) ಉಂಟಾಗಿ ಸಾವು ಸಂಭವಿಸಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!