ರಾಜ್ಯ ಬಜೆಟ್: ದಕ್ಷಿಣ ಕನ್ನಡ ಜಿಲ್ಲೆಗೆ 2 ಹೊಸ ಪೊಲೀಸ್ ಠಾಣೆಯನ್ನು ಘೋಷಣೆ
ಬೆಂಗಳೂರು: ರಾಜ್ಯದಲ್ಲಿ 12 ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಹೊಸದಾಗಿ ಆರಂಭವಾಗುವ ಪೊಲೀಸ್ ಠಾಣೆಯ ವಿವರವನ್ನು ಘೋಷಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ 2 ಹೊಸ ಪೊಲೀಸ್ ಠಾಣೆಯನ್ನು ಘೋಷಿಸಲಾಗಿದೆ. ಹೊಸದಾಗಿ ಪ್ರಾರಂಭವಾಗುವ ಪೊಲೀಸ್ ಠಾಣೆಗಳ ವಿವರ ಇಲ್ಲಿದೆ.
ದಕ್ಷಿಣ ಕನ್ನಡ – ಮಾಣಿ ಪೊಲೀಸ್ ಠಾಣೆ
ದಕ್ಷಿಣ ಕನ್ನಡ – ಸಜಿಪನಡು ಪೊಲೀಸ್ ಠಾಣೆ
ಬೆಂಗಳೂರು ಗ್ರಾಮಾಂತರ – ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ
ಬೆಳಗಾವಿ – ಯರಗಟ್ಟಿ ಪೊಲೀಸ್ ಠಾಣೆ
ಯಾದಗಿರಿ – ಕಕ್ಕೇರಾ ಪೊಲೀಸ್ ಠಾಣೆ
ಚಿತ್ರದುರ್ಗ – ಹಿರಿಯೂರು ಸಂಚಾರ ಪೊಲೀಸ್ ಠಾಣೆ
ದಾವಣಗೆರೆ – ಆನಗೋಡು ಪೊಲೀಸ್ ಠಾಣೆ
ಹಾವೇರಿ – ತಿಳುವಳ್ಳಿ ಪೊಲೀಸ್ ಠಾಣೆ
ಮೈಸೂರು – ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
ವಿಜಯಪುರ – ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ
ಕೋಲಾರ – ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ
ಚಾಮರಾಜನಗರ – ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ




