July 4, 2026

ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಐವರು ಮಕ್ಕಳು ಮೃತ್ಯು

0
gas-cylinder-explosion-in-rajaun-banka4.jpg

ಬಿಹಾರ್: ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಐವರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.

ರಾಜಾವರ್ ಗ್ರಾಮದ ಅಂಕುಶ್​ ಕುಮಾರ್​ (10), ಶಿವಾನಿ ಕುಮಾರಿ​ (9), ಸೋನಿ ಕುಮಾರಿ (8), ಸೀಮಾ ಕುಮಾರಿ (5) ಮತ್ತು ಅಂಶುಕುಮಾರಿ(10) ಮೃತಪಟ್ಟ ದುರ್ದೈವಿಗಳು.

ಅಶೋಕ್​ ಪಸ್ವಾನ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಪೊಲೀಸರು ಅದನ್ನು ಇನ್ನೂ ದೃಢಪಡಿಸಿಲ್ಲ. ಸ್ಥಳದಲ್ಲಿ ಒಂದು ಸುಟ್ಟು ಕರಕಲಾಗಿರುವ ಸಿಲಿಂಡರ್ ಗ್ಯಾಸ್ ಮತ್ತು ರೆಗ್ಯುಲೇಟರ್ ಸಿಕ್ಕಿದೆ. ಮನೆಯಲ್ಲಿರುವ ಎಲ್ಲ ವಸ್ತುಗಳೂ ಸುಟ್ಟು ಬೂದಿಯಾಗಿದೆ ಎಂದು ಬಂಕಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!