April 16, 2026

ಮಲ್ಪೆ: ಮೀನು ಏಲಂ ವಿಚಾರಕ್ಕೆ ವ್ಯಕ್ತಿಗೆ ಹಲ್ಲೆ: ಪ್ರಕರಣ ದಾಖಲು

0
image_editor_output_image1755083226-1772235526080.jpg

ಮಲ್ಪೆ: ಮೀನು ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಫೆಬ್ರವರಿ 27 ರಂದು ಸಂಭವಿಸಿದೆ. ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಹಲ್ಲೆಗೆ ಒಳಗಾದವರನ್ನು ಅಂಬಲಪಾಡಿಯ ಶೇಕ್ ಅಯ್ಯಬ್(52) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯ ಗೊಂಡಿರುವ ಇವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ಮಲ್ಪೆಯಲ್ಲಿ ಮೀನು ಏಲಂ ಮಾಡುವ ಕೆಲಸ ಮಾಡಿಕೊಂಡಿದ್ದು ಇಂದು ಬೆಳಿಗ್ಗೆ ಬಾಲಕನೋರ್ವ ಆಯುಬ್ ಅವರಿಗೆ ಮೀನನ್ನು ತಂದು ಕೊಟ್ಟಿದ್ದನು ಅದರಂತೆ ಅವರು ಏಲಂ ಮಾಡುತ್ತಿರುವಾಗ ಅಲ್ಲಿಗೆ ಬಂದ ಮಿಥುನ್ ಕರ್ಕೇರಾ, ನೀನು ಯಾಕೆ ಮೀನು ತಂದಿ ? ಯಾಕೆ ಏಲಂ ಮಾಡುತ್ತಿದ್ದಿ ಎಂದು ಹೇಳಿ ಕೈಯಿಂದ ಮುಖ, ಕಣ್ಣಿಗೆ ಹೊಟ್ಟೆ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ ಎನ್ನಲಾಗಿದೆ.

ಅಲ್ಲದೆ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!