February 28, 2026

ಗಜೇಂದ್ರ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

0
image_editor_output_image-1906339046-1772148732381.jpg

ಚಿಕ್ಕಬಳ್ಳಾಪುರ: ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂವರಿಗೆ ಜಿಲ್ಲೆಯ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಜೊತೆಗೆ ತಲಾ 25 ಸಾವಿರ ರೂ, ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದವರನ್ನು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿಯ ಯಲ್ಲಂಪಲ್ಲಿ ಗ್ರಾಮದ ನಿವಾಸಿಗಳಾದ ಸುರೇಂದ್ರ ಬಾಬು (39) ಶ್ರೀನಾಥ (36) ಹಾಗೂ ಎಂ ವೆಂಕಟೇಶ್ ಎನ್ (22) ಎಂದು ಗುರುತಿಸಲಾಗಿದೆ.

2023 ರ ಡಿಸೆಂಬರ್ 6 ರಂದು ಗಜೇಂದ್ರ ಕೊಲೆ ಪ್ರಕರಣ ನಡೆದಿತ್ತು. ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇದ್ದರೂ ಸಹ ಎಸ್ಪಿ ಕುಶಲ್ ಚೌಕ್ಸೆ ರವರ ಮಾರ್ಗದರ್ಶನದಲ್ಲಿ ಕೊಲೆ ಪ್ರಕರಣದ ಸಂಬಂದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸಾಂದರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳಿಂದ ನ್ಯಾಯಾಲಯಕ್ಕೆ ಬಾಗೇಪಲ್ಲಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಪ್ರಶಾಂತ್ ಆರ್ ವರ್ಣಿ ರವರು ಕ್ರಮಬದ್ದವಾಗಿ ತನಿಖೆಯನ್ನು ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಶ್ರೀಧರ ಸುರೇಂದ್ರ, ಶ್ರೀನಾಥ ಹಾಗೂ ಎಡಿ ವೆಂಕಟೇಶ್ ಎನ್ ರವರಿಗೆ ಜೀವಾವಧಿ ಕಾರಾಗೃಹ ಸಜೆಯನ್ನು ಮತ್ತು 25,000 ರೂ ದಂಡವನ್ನು ವಿಧಿಸಿ ಫೆ.19 ರಂದು ತೀರ್ಪು ಪ್ರಕಟಿಸಿದ್ದಾರೆಂದು ಎಸ್ಪಿ ಕುಶಲ್ ಚೌಕ್ಸೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕರಾದ ಅರುಣಾಕ್ಷಿ ಬಿ ಅವರು ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!