February 24, 2026

ಪಾನಿಪುರಿ ಮಸಾಲಾ ಪಾತ್ರೆಯಲ್ಲಿ ಜೀವಂತ ಇಲಿ ಪತ್ತೆ: ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

0
image_editor_output_image1030656454-1771891078050.jpg

ಅಮೃತಸರ: ರಸ್ತೆ ಬದಿಯ ಆಹಾರ ಪದಾರ್ಥಗಳ ಶುಚಿತ್ವದ ಬಗ್ಗೆ ಸದಾ ಕಾಲ ಆತಂಕಗಳಿದ್ದೇ ಇರುತ್ತವೆ. ಇದೀಗ ಅಮೃತಸರದಲ್ಲಿ ನಡೆದಿರುವ ಘಟನೆಯೊಂದು ಪಾನಿಪುರಿ ಪ್ರಿಯರಲ್ಲಿ ನಡುಕ ಹುಟ್ಟಿಸುವಂತಿದೆ. ರಸ್ತೆ ಬದಿಯ ಪಾನಿಪುರಿ ಗಾಡಿಯೊಂದರ ಮಸಾಲಾ ಪಾತ್ರೆಯಲ್ಲಿ ಜೀವಂತ ಇಲಿಯೊಂದು ಪತ್ತೆಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರ ಕರಣ್ ಧಂಜು ಎಂಬುವವರು ತಮ್ಮ ಸ್ನೇಹಿತನೊಂದಿಗೆ ಗೋಲ್‌ಗಪ್ಪ ಸವಿಯುತ್ತಿದ್ದಾಗ ಈ ಆಘಾತಕಾರಿ ದೃಶ್ಯ ಕಂಡುಬಂದಿದೆ. ಗಾಡಿಯ ಮೇಲಿದ್ದ ದೊಡ್ಡ ಮಸಾಲಾ ಪಾತ್ರೆಯೊಳಗೆ ಏನೋ ಚಲಿಸುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ವಿಡಿಯೋ ಚಿತ್ರೀಕರಿಸಿದ್ದಾರೆ.

ಈ ವೇಳೆ ಪಾತ್ರೆಯೊಳಗಿದ್ದ ಇಲಿಯು ನೀರಿನಿಂದ ಮೇಲೆ ಜಿಗಿದು ಚರಂಡಿಯತ್ತ ಓಡಿಹೋಗಿರುವುದನ್ನು ವಿಡಿಯೋದಲ್ಲಿ ಕಾಣಿಸುತ್ತಿದೆ. ಮಾರಾಟಗಾರನು ಇಲಿಯನ್ನು ಹೊರಹಾಕಲು ಪ್ರಯತ್ನಿಸುತ್ತಿರುವುದು ಕೂಡ ದೃಶ್ಯದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!