February 23, 2026

ವಿಟ್ಲ: ಕಾಣೆಯಾಗಿದ್ದ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ ಪ್ರಕರಣ: ವಿದ್ಯಾರ್ಥಿನ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ: SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಒತ್ತಾಯ

0
image_editor_output_image1513285806-1771839819059.jpg

ವಿಟ್ಲ: ಕೊಡಂಗಾಯಿಯಲ್ಲಿ ಆರ್ಎಸ್ಎಸ್ ಚಲಾಯಿಸುತ್ತಿರುವ ಗುರಕುಳ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕಾಣೆಯಾದ ಮಾಹಿತಿ ಹರಿದಾಡುತ್ತಿತ್ತು. ಇದೀಗ ಆ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಆ ವಿದ್ಯಾರ್ಥಿನಿಗೆ ಏನಾಯಿತು? ಕೊಲೆಯೇ, ಆತ್ಮಹತ್ಯೆಯೇ ಎಂಬುವುದು ಇನ್ನು ತನಿಖೆಯಲ್ಲಿ ಬಹಿರಂಗವಾಗಬೇಕಿದೆ ಎಂದು SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಒತ್ತಾಯಿಸಿದ್ದಾರೆ.

ಇಲ್ಲಿರುವುದು ಇಷ್ಟೇ ಈ ಬಾಲಕಿಗೆ ಏನಾಯಿತು ಎನ್ನುವ ಕುರಿತು ಸೂಕ್ತ ತನಿಖೆ ನಡೆಯಬೇಕು. ಆರ್ಎಸ್ಎಸ್ ಅಡಿಯಲ್ಲಿರುವ ಸಂಸ್ಥೆ ಆದ್ದರಿಂದ ಸಂಘಪರಿವಾರದ ನಾಯಕರು /ಬಂಟ್ವಾಳ ಶಾಸಕರು ಎಲ್ಲಾ ಸೇರಿ ರಾಜಕೀಯ ಬಲವನ್ನು ಉಪಯೋಗಿಸಿ ಪ್ರಕರಣ ಮುಚ್ಚಿ ಹಾಕುವ ಸಾಧ್ಯತೆ ಇದೇ. ಅಲ್ಲಿ ಏನು ನಡೆಯುತ್ತಿದೆ ಯಾರು ಬರುತ್ತಾರೆ ಯಾರು ಹೋಗುತ್ತಾರೇ ಎನ್ನುವುದು ಹಿಂದಿನಿಂದಲ್ಲೂ ಯಾರಿಗೂ ಗೊತ್ತಾಗ್ತಿರಲಿಲ್ಲ. ಸಾರ್ವಜನಿಕರಿಗೆ ಪ್ರವೇಶ ಕೂಡ ಕೊಡುತ್ತಿರಲಿಲ್ಲ. ಹಿಂದೆಯೂ ಅಲ್ಲಿ ದೌರ್ಜನ್ಯ ನಡೆದ ಕುರಿತು ವಿದ್ಯಾರ್ಥಿನಿಗಳು ಬಂದು ಹೇಳಿದ ಇತಿಹಾಸ ಇದೇ. ಹಾಗಾಗಿ ಈ ವಿದ್ಯಾರ್ಥಿನಿಯ ಕುಟುಂಬಕ್ಕೇ ನ್ಯಾಯ ದೊರಕಿಸಿ ಕೊಡಲು ಗೃಹ ಇಲಾಖೆ ಸನ್ನದ್ದವಾಗಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!