February 23, 2026

ಮಂಗಳೂರು: ಕಿನ್ನಿಗೋಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

0
image_editor_output_image1236625617-1771803349136.jpg

ಮಂಗಳೂರು: ಕಿನ್ನಿಗೋಳಿ ಸುತ್ತಮುತ್ತಲಿನ ಐಕಳ, ತಾಳಿಪ್ಪಾಡಿ, ಕೊಳ್ಬೇಟ್ಟು ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಳೆದ ಕೆಲ ವಾರಗಳಿಂದ ಕಿನ್ನಿಗೋಳಿ ಪ್ರದೇಶದಲ್ಲಿ ಚಿರತೆಯ ಸಂಚಾರ ಕಂಡುಬಂದಿದ್ದು ಹಲವಾರು ಸಾಕುಪ್ರಾಣಿಗಳನ್ನು ಬಲಿಪಡೆದುಕೊಂಡಿತ್ತು. ಸೂರ್ಯಸ್ತದ ನಂತರ ಸ್ಥಳೀಯ ನಿವಾಸಿಗಳಿಗೆ ಮನೆಗಳಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪ್ರದೇಶದ ಕೆಲ ಯುವಕರು ಕಳೆದ ಒಂದೆರಡು ದಿನಗಳಿಂದ ಅಪಾಯಕಾರಿ ಚಿರತೆಯನ್ನು ಸೆರೆಹಿಡಿಯುವ ಸಾಹಸಕ್ಕೆ ಮುಂದಾಗಿದ್ದರು. ಕೊನೆಗೂ ಶನಿವಾರ ರಾತ್ರಿ 9 ರ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸ್ಥಳೀಯ ನಿವಾಸಿಗಳ ಪ್ರಕಾರ ಇನ್ನೂ ಒಂದೆರಡು ಚಿರತೆಗಳ ಸಂಚಾರ ಗೋಚರಿಸಿದ್ದು ಎಚ್ಚರಿಕೆಯಿಂದ ಓಡಾಡುವಂತೆ ತಿಳಿಸಲಾಗಿದೆ. ಚಿರತೆ ನಿರೀಕ್ಷೆಣೆಗೆಂದೇ ಸಿಬ್ಬಂಧಿಗಳನ್ನು ನಿಯಮಿಸಲಾಗಿದ್ದು ಒಂದೆರಡು ದಿನಗಳಲ್ಲಿ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಡುವ ಕೆಲಸ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ ದಕ್ಷಿಣ ಕನ್ನಡ ವಿವಿಧ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ಜನರ ಪ್ರಾಣದಕ್ಕೆ, ಹಾಗೂ ಕೃಷಿಗೆ ಭಧ್ರತೆಯೋದಗಿಸಬೇಕಾಗಿದೆ ಎಂಬ ಕೂಗು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!