July 2, 2026

ಬಂಡಿತ್ತಡ್ಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಇಸ್ಮಾಯಿಲ್ ಕುಕ್ಕಾಜೆಗೆ ಸನ್ಮಾನ

0
IMG-20260213-WA0112

ಬಂಡಿತ್ತಡ್ಕ: ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ‌ ಕರ್ನಾಟಕ ‌ಇದರ‌ ವತಿಯಿಂದ 75 ನೇ  ರಾಜ್ಯ ಸಮಾವೇಶದಲ್ಲಿ ದ. ಕ. ಜಿ. ಪಂ. ಹಿ. ಪ್ರಾ ಶಾಲೆ ಬಂಡಿತ್ತಡ್ಕ‌ ಶಾಲೆಯ ಹಳೆ ವಿದ್ಯಾರ್ಥಿ ಆಗಿರುವ ಇಸ್ಮಾಯಿಲ್ ಕುಕ್ಕಾಜೆ ಇವರನ್ನು ಅಭಿನಂದಿಸಲಾಯಿತು.

ಅದೇ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಅದೆಷ್ಟೋ ಮನಸ್ಸುಗಳನ್ನು ಒಟ್ಟುಗೂಡಿಸಿ ಹಳೆವಿದ್ಯಾರ್ಥಿ ಸಂಘದ ಗುರಿ ಉದ್ದೇಶಗಳನ್ನು ಸಾಕಾರಗೊಳಿಸಿದ ಇಸ್ಮಾಯಿಲ್ ಕುಕ್ಕಾಜೆ ಅವರು ಹಗಲು ರಾತ್ರಿಯೆನ್ನದೇ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡರು. ಇಂದು ಇಸ್ಮಾಯಿಲ್ ಕುಕ್ಕಾಜೆ ಅವರ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಮುಚ್ಚುವ ಹಂತದಲ್ಲಿದ್ದ ಬಂಡಿತ್ತಡ್ಕ ಶಾಲೆ ಮಾದರಿ ಶಾಲೆಯಾಗಿ ಅಲ್ಲದೇ ದಾಖಲಾತಿ ಹೆಚ್ಚುವಲ್ಲಿಯೂ ತಲೆ ಎತ್ತಿ ನಿಂತಿದೆ. ಇವರ ಈ ಸಾಧನೆಯನ್ನು ಗುರುತಿಸಿದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನವು ಮಂಗಳೂರು ಪುರಭವನದಲ್ಲಿ ಇಸ್ಮಾಯಿಲ್ ಕುಕ್ಕಾಜೆಯವರನ್ನು ಗುರುತಿಸಿ ಸನ್ಮಾನಿಸಿದೆ. ಈ ಸಮಾರಂಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್ ಪ್ರಮುಖರಾದ ಗೀತಾಂಜಲಿ ಸುವರ್ಣ ಉಡುಪಿ, ಜ್ಞಾನೇಶ್, ಡಾ| ಆರ್.ಕೆ ನಾಯರ್ ಸುಳ್ಯ, ನಾರಾಯಣ್ ರೈ ಕುಕ್ಕುವಳ್ಳಿ, ವಾಸುದೇವ ರಾವ್ ಉಡುಪಿ, ಭಾಸ್ಕರ ಶೆಟ್ಟಿ ಉಡುಪಿ, ಡಾ| ಯು.ಪಿ ಶಿವಾನಂದ, ಡಾ| ಅಣ್ಣಯ್ಯ ಕುಲಾಲ್, ಎಂ ಬಿ ಸದಾಶಿವ ಸುಳ್ಯ,  ಸುಧಾಕರ ರೈ, ಮುಹಮ್ಮದ್ ಕುಕ್ಕುವಳ್ಳಿ, ರವಿಕುಮಾರ್ ಬೆಂಗಳೂರು, ರಫೀಕ್ ಮಾಸ್ಟರ್, ಭಾಸ್ಕರ ರೈ ಕುಕ್ಕುವಳ್ಳಿ, ಡಾ| ಶ್ರೀನಾಥ್, ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸುದರ್ಶನ ಪಡಿಯಾರ್, ಹರಿಕೃಷ್ಣ ಪುನರೂರು, ಹರೇಕಳ ಹಾಜಬ್ಬ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!