ಶೀಘ್ರ ಗುಣಮುಖರವಾಗುವಂತೆ ಶಾಸಕ ಡಾ. ಮಂಜುನಾಥ ಭಂಡಾರಿಯರಿಗೆ ಇತಿಹಾಸ ಪ್ರಸಿದ್ದ ಉಳ್ಳಾಲದಲ್ಲಿ ವಿಶೇಷ ಪ್ರಾರ್ಥನೆ
ಉಳ್ಳಾಲ: ಸಾರ್ವಜನಿಕ ಬದುಕಿನಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮನ ಗೆದ್ದಿರುವ ಮಾನ್ಯ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯದ್ಯಕ್ಷರೂ, ಶಾಸಕರಾದ ಶ್ರೀ.ಮಂಜುನಾಥ ಭಂಡಾರಿ ಅವರು ಶೀಘ್ರವೇ ಸಂಪೂರ್ಣ ಚೇತರಿಸಿಕೊಂಡು, ಹಿಂದಿನಂತೆ ಪಕ್ಷ ಸಂಘಟನೆ ರಾಜಕೀಯ, ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಲಿ. ಭಗವಂತನು ಅವರಿಗೆ ದೃಢ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಮುಸ್ಲಿಂ ಅಲ್ಪಸಂಖ್ಯಾತರ ನೇತೃತ್ವದಲ್ಲಿ ದಕ್ಷಿಣ ಭಾರತದ ಅಜ್ಮೀರ್ ಎಂದೇ ಕರೆಯಲ್ಪಡುವ ಇತಿಹಾಸ ಪ್ರಸಿದ್ದ ಮುಸ್ಲಿಮರ ಪುಣ್ಯಕ್ಷೇತ್ರವಾದ ಸೈಯದ್ ಮದನಿ ದರ್ಗಾ ಉಳ್ಳಾಲ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಪ್ರದಾನ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್ ಮಾಜಿ ಉಪಾದ್ಯಕ್ಷರಾದ ಎಂ.ಎಸ್.ಮಹಮ್ಮದ್, ದಕ್ಷಿಣ ಕನ್ನಡ ಸೇವಾದಳದ ಜುಭೈರ್, ನಝೀರ್ ಪಟ್ಟೋರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೈದರ್ ಕೈರಂಗಳ, ಅಬ್ದುಲ್ ರಜಾಕ್, ಜುಬೈರ್ ಕುರ್ನಾಡು, ಅಡ್ವಕೇಟ್ ಉಮ್ಮರ್ ಕೊಡಂಗೆ, ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಸತ್ತಾರ್ ದೇರಳಕಟ್ಟೆ, ಸಾಲೆತ್ತೂರು ಗ್ರಾಮ ಪಂಚಾಯತ್ ಅದ್ಯಕ್ಷರಾದ ಹಸೈನಾರ್ ಮೆದು, ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ, ಮಂಚಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಜಿ.ಎಮ್, ಇಬ್ರಾಹಿಂ, ಯುವ ಕಾಂಗ್ರಸ್ ಮುಖಂಡ ಹಪೀಝ್ ಸಾಲೆತ್ತೂರು, ಮನ್ಸೂರು ಉಳ್ಳಾಲ, ರಿಯಾಜ್ ಮುಕ್ಕಚ್ಚೇರಿ, ಅಶ್ರಪ್ ಸಾಂಡೋ, ಹಾರೀಸ್ ಕೋಡಿಜಾಲ್, ರಪೀಕ್ ಯು.ಟಿ, ಅಬ್ದುಲ್ ಸಲೀಂ, ರಪೀಕ್ ಎಸ್.ಎ, ಅಬ್ದುಲ್ ಹಮೀದ್ ಸುರಿಬೈಲ್, ಮಂಗಳೂರು ನಗರಾಭಿವೃದ್ಧಿ ಪ್ರಾದಿಕಾರದ ಅದ್ಯಕ್ಷರಾದ ಸದಾಶಿವ ಉಳ್ಳಾಲ್, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ನಿತ್ಯಾನಂದ ಸುರೇಖಾ, ಚಂದ್ರಹಾಸ್, ದೇವಕಿ ಆರ್ ಉಳ್ಳಾಲ್, ಅಮೀತಾ ಅಶ್ವೀನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.




