July 2, 2026

ಮಂಗಳೂರು: ಚಲಿಸುತ್ತಿದ್ದ ಓಮ್ನಿ ವ್ಯಾನ್‌ನಲ್ಲಿ ಬೆಂಕಿ ಅವಘಡ

0
image_editor_output_image1000230818-1770962549971.jpg

ಮಂಗಳೂರು: ಚಲಿಸುತ್ತಿದ್ದ ಓಮ್ನಿ ವ್ಯಾನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಹಿಂದಿನಿಂದ ಬರುತ್ತಿದ್ದ ವಾಹನ ಸವಾರರ ಸಮಯಪ್ರಜ್ಞೆಯಿಂದಾಗಿ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಕೋಟೆಕಾರಿನ ಅಡ್ಕ ಎಂಬಲ್ಲಿ ಗುರುವಾರ ಸಂಭವಿಸಿದೆ.

ತಲಪಾಡಿ ನಿವಾಸಿ ರಿಯಾಜ್ ಎಂಬವರು ಗುರುವಾರ ಮಧ್ಯಾಹ್ನ ಅಡ್ಕದ ಗ್ಯಾರೇಜ್‌ನಿಂದ ರಿಪೇರಿ ಮುಗಿದಿದ್ದ ತಮ್ಮ ವ್ಯಾನ್ ಅನ್ನು ಪಡೆದುಕೊಂಡು ಬರುತ್ತಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿ ತಲಪಾಡಿಯತ್ತ ತೆರಳುತ್ತಿದ್ದಾಗ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ.

ಆದರೆ, ವಾಹನಕ್ಕೆ ಬೆಂಕಿ ತಗುಲಿರುವುದು ರಿಯಾಜ್ ಅವರ ಗಮನಕ್ಕೆ ಬಂದಿರಲಿಲ್ಲ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ವಾಹನ ಸವಾರರು ಬೆಂಕಿ ಕಾಣಿಸಿಕೊಂಡ ಬಗ್ಗೆ ರಿಯಾಜ್ ಅವರನ್ನು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!