ವಿಟ್ಲ: ಫೆ.10 ಮತ್ತು 11ರಂದು ಒಕ್ಕೆತ್ತೂರು ಮಸೀದಿಯಲ್ಲಿ ಎರಡು ದಿನಗಳ ಧಾರ್ಮಿಕ ಮತಪ್ರವಚನ: ಫೆ. 11 ರಂದು ಸಿರಾಜುದ್ದೀನ್ ಖಾಸಿಮಿ ಅವರಿಂದ ಪ್ರಭಾಷಣ-ಸಾವಿರಾರು ಜನ ಸೇರುವ ನಿರೀಕ್ಷೆ
ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಎರಡು ದಿನಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವು ಫೆಬ್ರವರಿ 10 ಹಾಗೂ 11 ರಂದು ನಡೆಯಲಿದೆ.
ಖತೀಬ್ ಮಹಮ್ಮದ್ ರಫಿಕ್ ಅಹ್ಸನಿ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರಾಗಿ ಅಬ್ದುಲ್ ರಝಾಕ್ ಅಬ್ರಾರಿ ಪಟ್ಟಣತಿಟ್ಟಂ ಹಾಗೂ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಆಗಮಿಸಲಿದ್ದಾರೆ.
ಶೈಖುನಾ ಮಹಮೂದುಲ್ ಫೈಝಿ ವಾಲೆಮುಂಡೋವು, ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಸ್ಪೀಕರ್ ಯು.ಟಿ.ಖಾದರ್, ಡಾ.ಬಶೀರ್ ಜನಪ್ರಿಯ, ಯು.ಟಿ.ಇಫ್ತಿಕಾರ್ ಅಲಿ, ದಿನೇಶ್ ಕೋಡಪದವು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಡಾ.ವಿ.ಕೆ.ಹೆಗ್ಡೆ, ರೊನಾಲ್ಡ್ ಮಾರ್ಟೀಸ್ ಹಾಗೂ ಝಕರಿಯಾ ಜೋಕಟ್ಟೆ ಇವರನ್ನು ಸನ್ಮಾನಿಸಲಾಗುವುದು ಎಂದು ಮಸೀದಿ ಅಧ್ಯಕ್ಷ ಹಾಜಿ ವಿ.ಎಂ.ಅಶ್ರಫ್ ಕರಾವಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




