February 8, 2026

ಮಡಿಕೇರಿ: ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ ಉದ್ಯಮಿ: ಹೆಂಡತಿ, ಮಕ್ಕಳು ಗಂಭೀರ

0
image_editor_output_image-1811176668-1770544356072.jpg

ಮಡಿಕೇರಿ: ಕಷ್ಟದ ಸಮಯದಲ್ಲಿ ಕೊಟ್ಟ ಹಣವನ್ನು ವಾಪಸ್‌ ಕೊಡದೇ ಇದ್ದಿದ್ದಕ್ಕೆ ಕೊಡಗಿನ ಉದ್ಯಮಿಯೊಬ್ಬರು ಮನನೊಂದು ಕೇರಳದಲ್ಲಿರುವ ಸಾಲ ಪಡೆದಿದ್ದ ವ್ಯಕ್ತಿಯ ಮನೆ ಮುಂದೆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಂಡತಿ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಪೊನ್ನಂಪೇಟೆಯ ಕುಟ್ಟ ಗ್ರಾಮದ ನಜೀರ್ ಆತ್ಮಹತ್ಯೆಗೆ ಶರಣಾದವರು. ಕೇರಳದ‌ ವಯನಾಡು‌ ಮೂಲದ ಬಾಪು ಎಂಬ ವ್ಯಕ್ತಿಗೆ ನಜೀರ್ ಸಾಲ ಕೊಟ್ಟಿದ್ದರು. ಆದರೆ ಅವರು ವಾಪಸ್‌ ಕೊಡದಿದ್ದಕ್ಕೆ ಮನನೊಂದು ಹೆಂಡತಿ ಮೂವರು ಮಕ್ಕಳೊಂದಿಗೆ ಕಾರಿನಲ್ಲಿ ಕುಳಿತು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಅಕ್ಕಪಕ್ಕದ ಜನರು ಕಾರಿನಲ್ಲಿದ್ದ ಉದ್ಯಮಿಯ ಪತ್ನಿ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳೆಗೆ 22% ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಮೂವರು ಮಕ್ಕಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಮಕ್ಕಳಿಗೆ ಮಾನಂತವಾಡಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯನ್ನು ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!