February 9, 2026

ಮಂಗಳೂರು: ಸಂಬಂಧಿಕರ ಮನೆಯಿಂದಲೇ ಚಿನ್ನಾಭರಣ ಕಳವು: ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಅರೆಸ್ಟ್

0
image_editor_output_image804879484-1770533597443.jpg

ಮಂಗಳೂರು: ಸಂಬಂಧಿಕರ ಮನೆಯಿಂದಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಇಬ್ಬರನ್ನು ಬಜಪೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಕಳವಾರು ಚರ್ಚ್ ಬಳಿಯ ನಿವಾಸಿ ಅಬ್ದುಲ್‌ ನಾಸರ್ ಅಲಿಯಾಸ್ ನಾಸಿರ್‌ ಅಲಿಯಾಸ್ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್‌ ಅಲಿಯಾಸ್ ಇಮ್ಮು (37) ಎಂದು ಗುರುತಿಸಲಾಗಿದೆ.

ದಿನಾಂಕ 23-09-2025 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ರವರು ತನ್ನ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಕಳ್ಳತನವಾಗಿರುತ್ತದೆ.

ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!